ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮುಲಾಯಂ ವಿರುದ್ಧ ಟೀಕಾ ಪ್ರಹಾರ ಮುಂದುವರಿಸಿದ ಬೇಣಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮೇಲೆ ಕೇಂದ್ರ ಸಚಿವ ಬೇಣಿ ಪ್ರಸಾದ್ ವರ್ಮಾ ತಮ್ಮ ಟೀಕಾ ಪ್ರಹಾರ...

Rashmi Kasaragodu
Updated On : 26 Mar 2013, 11:52 am

ಬರಬಂಕಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮೇಲೆ ಕೇಂದ್ರ ಸಚಿವ ಬೇಣಿ ಪ್ರಸಾದ್ ವರ್ಮಾ ತಮ್ಮ ಟೀಕಾ ಪ್ರಹಾರ ಮುಂದುವರಿಸಿದ್ದಾರೆ. ಈ ಬಾರಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ ಅವರನ್ನು ಹೊಗಳಿದ್ದಕ್ಕಾಗಿ ಮುಲಾಯಂ ಅವರನ್ನು ಬೇಣಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಎರಡು ದಿನಗಳ ಹಿಂದೆ ಮುಲಾಯಂ ಸಿಂಗ್ ತಮ್ಮ ರಾಜ್ಯದ ಆಡಳಿತದ ಬಗ್ಗೆ ಮಾತನಾಡುವಾಗ, ಉತ್ತರ ಪ್ರದೇಶದ ನಿಯಮ ಕಾನೂನುಗಳ ಬಗ್ಗೆ ಅಡ್ವಾಣಿಯವರ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದ್ದು, ಅಡ್ವಾಣಿ ಯಾವತ್ತೂ ಸುಳ್ಳು ಹೇಳುವ ವ್ಯಕ್ತಿಯಲ್ಲ ಎಂದಿದ್ದರು.

ಮಾರ್ಚ್ 23ರಂದು ಲಕ್ನೋದಲ್ಲಿ ಮಾತನಾಡಿದ ಮುಲಾಯಂ, ಉತ್ತರ ಪ್ರದೇಶ ಕೆಟ್ಟ ರಾಜ್ಯ, ಅಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಅಡ್ವಾಣಿ ಹೇಳಿದ್ದರು. ಅವರು ಹೇಳಿದ್ದು ನಿಜ ಎಂಬುದು ನನಗೆ ಅರ್ಥವಾಗಿದೆ. ಅವರೆಂದೂ ಸುಳ್ಳು ಹೇಳುವುದಿಲ್ಲ. ಅವರು ಯಾವತ್ತೂ ಸತ್ಯವನ್ನೇ ನುಡಿಯುತ್ತಾರೆ, ನನಗೆ ಅವರನ್ನು ಭೇಟಿಯಾಗಬೇಕಿದೆ ಎಂದು ಹೇಳಿದ್ದರು.

ಮುಲಾಯಂರ ಈ ಹೇಳಿಕೆಗೆ ಕಿಡಿ ಕಾರಿದ ಬೇಣಿ, ಅಡ್ವಾಣಿಯವರ ಹೆಸರನ್ನೆತ್ತದಿದ್ದರೂ, ಸತ್ಯವನ್ನೇ ಒಪ್ಪಿಕೊಳ್ಳದ ಒಂದು ಪಕ್ಷದ ನೇತಾರ, ಸುಳ್ಳನ್ನೇ ಹೇಳುವುದಿಲ್ಲ ಎಂದು ಒಪ್ಪುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಅದೇ ವೇಳೆ ಯುಪಿಎ ಸರ್ಕಾರದ ಹಗರಣಗಳನ್ನು ಒಪ್ಪಿಕೊಂಡ ಬೇಣಿ, ತಪ್ಪಿತಸ್ಥರು ಜೈಲು ಶಿಕ್ಷೆ ಅನುಭವಿಸುತ್ತಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement