ವರ್ತೂರ್ ಪ್ರಕಾಶ್ ಅಕ್ರಮ ಆಸ್ತಿ ಸಂಪಾದನೆ: ಏಪ್ರಿಲ್ 2ಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು: ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ಶಾಸಕ ವರ್ತೂರ್ ಪ್ರಕಾಶ್ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆಯನ್ನು ಏಪ್ರಿಲ್ 2ಕ್ಕೆ ಮುಂದೂಡಲಾಗಿದೆ.
ಶಂಕರೇಗೌಡ ಎಂಬುವವರು ಶಾಸಕ ವರ್ತೂರ್ ಪ್ರಕಾಶ್ ಅಕ್ರಮ ಆಸ್ತಿ ಸಂಪಾದಿಸಿದ್ದಾರೆಂದು ಆರೋಪಿಸಿ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಮಂಗಳವಾರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಏಪ್ರಿಲ್ 2ಕ್ಕೆ ಮೂಂದೂಡಿದೆ.
ವರ್ತೂರು ಪ್ರಕಾಶ್ ಅವರು ಚುನಾವಣೆ ಆಯೋಗಕ್ಕೆ ಹಾಗೂ ಲೋಕಾಯುಕ್ತಕ್ಕೆ ತಮ್ಮ ಆಸ್ತಿಯ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಹೊಸಕೋಟೆಯಲ್ಲಿ 13 ಎಕರೆ ಜಮೀನು ಖರೀದಿ, ಕೋಲಾರದಲ್ಲಿ ಬಂಗಲೇ ಖರೀದಿ, ಡಾಲರ್ಸ್ ಕಾಲೋನಿ ಹಾಗೂ ವರ್ತೂರಿನಲ್ಲಿ ಸಾಕಷ್ಟು ಆಸ್ತಿ ಸಂಪಾದಿಸಿದ್ದಾರೆಂದು ಅವರು ದೂರಿದ್ದಾರೆ.