ಕೂಡಂಕುಲಂ ಅಣುಸ್ಥಾವರ ಯುನಿಟ್-1 ಮುಂದಿನ ತಿಂಗಳು ಕಾರ್ಯಾರಂಭ
ವಿವಾದಿತ ಕೂಡಂಕುಲಂ ಅಣು ಸ್ಥಾವರದ ಯುನಿಟ್-1 ಮುಂದಿನ ತಿಂಗಳಲ್ಲಿ ಕಾರ್ಯಾರಂಭವಾಗುವ ಸಾಧ್ಯತೆಯಿದೆ ಎಂದು ಪ್ರಧಾನಿ...
ದರ್ಬಾನ್: ವಿವಾದಿತ ಕೂಡಂಕುಲಂ ಅಣು ಸ್ಥಾವರದ ಯುನಿಟ್-1 ಮುಂದಿನ ತಿಂಗಳಲ್ಲಿ ಕಾರ್ಯಾರಂಭವಾಗುವ ಸಾಧ್ಯತೆಯಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಕಳೆದ ರಾತ್ರಿ ಬಿಆರ್ಐಸಿಎಸ್ ಸಭೆದಲ್ಲಿ ಭಾಗವಹಿಸಿದ್ದ ರಷ್ಯಾದ ಅಧ್ಯಕ್ಷ ವ್ಲಾಡಮಿರ್ ಪುತಿನ್ ಅವರಿಗೆ ಅಣು ಸ್ಥಾವರ ಮುಂದಿನ ತಿಂಗಳು ಕಾರ್ಯಾರಂಭವಾಗುವ ಬಗ್ಗೆ ಭರವಸೆ ನೀಡಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ.
ಕೂಡಂಕುಲಂ ಅಣುಸ್ಥಾವರದಲ್ಲಿ ಮುಂದಿನ ತಿಂಗಳು ಕಾರ್ಯಾರಂಭವಾಗುತ್ತದೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ. ಯೂನಿಟ್ 3 ಮತ್ತು 4 ಆರಂಭಕ್ಕೆ ಎಲ್ಲ ರೀತಿಯ ಅನುಮತಿಗಳು ಲಭಿಸಿದ್ದು, ಶೀಘ್ರವೇ ಈ ಎರಡು ಯೂನಿಟ್ಗಳು ಕಾರ್ಯಪ್ರವೃತ್ತವಾಗಲಿವೆ ಎಂದು ಸಿಂಗ್ ಪುತಿನ್ ಅವರಿಗೆ ಹೇಳಿದ್ದಾರೆ.
ಪ್ರಸ್ತುತ ಸಭೆಯಲ್ಲಿ ವಿತ್ತ ಸಚಿವ ಪಿ. ಚಿದಂಬರಂ, ವಾಣಿಜ್ಯ ಸಚಿವ ಆನಂದ್ ಶರ್ಮಾ ಮತ್ತು ದೇಶೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಮೊದಲಾದವರು ಭಾಗವಹಿಸಿದ್ದರು.