ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಡಿಎಂಡಿಕೆ ಶಾಸಕರ ವಜಾ ಶಿಕ್ಷೆ ಅವಧಿ ಇಳಿಕೆ

ವಿಧಾನಸಭೆಯಲ್ಲಿ ಪಕ್ಷದ ಮುಖಂಡರೊಬ್ಬರನ್ನು ಅವಹೇಳನ ಮಾಡಿದ ಆರೋಪದಲ್ಲಿ 1 ತಿಂಗಳ ಕಾಲ ವಜಾಗೈಯ್ಯಲ್ಪಟ್ಟ ಡಿಎಂಡಿಕೆ ಪಕ್ಷ...

Rashmi Kasaragodu
Updated On : 27 Mar 2013, 12:57 pm

ಚೆನ್ನೈ: ವಿಧಾನಸಭೆಯಲ್ಲಿ ಪಕ್ಷದ ಮುಖಂಡರೊಬ್ಬರನ್ನು ಅವಹೇಳನ ಮಾಡಿದ ಆರೋಪದಲ್ಲಿ 1 ತಿಂಗಳ ಕಾಲ ವಜಾಗೈಯ್ಯಲ್ಪಟ್ಟ ಡಿಎಂಡಿಕೆ ಪಕ್ಷದ 6 ಶಾಸಕರ ವಜಾ ಶಿಕ್ಷೆ ಅವಧಿಯನ್ನು 6 ತಿಂಗಳಿಗೆ ಇಳಿಕೆ ಮಾಡಲಾಗಿದೆ.

ಡಿಎಂಡಿಕೆ ಶಾಸಕರಾದ ವಿ.ಸಿ ಚಂದ್ರಕುಮಾರ್, ಕೆ ನಲ್ಲತಂಬಿ, ಡಿ. ಮುರುಗೇಶನ್, ಎಸ್. ಸೆಂದಿಲ್ ಕುಮಾರ್, ಬಿ ಪಾರ್ಥಸಾರಥಿ ಮತ್ತು ಆರ್. ಅರುಳ್‌ಸೇವನ್ ಮೊದಲಾದ ಶಾಸಕರು ವಿಜಯಕಾಂತ್ ಅವರ ಪಕ್ಷದ ಶಾಸಕ ಸಿ. ಮೈಕಲ್ ರಾಯಪ್ಪನ್ ಎಂಬವರನ್ನು ನಿಂದನೆ ಮಾಡಿದ್ದರು.

ಶಾಸಕರ ವಜಾ ಶಿಕ್ಷೆ ಅವಧಿಯನ್ನು ಕಡಿತಗೊಳಿಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದು, ಶಾಸಕರ ಮನವಿಯನ್ನು ಪುರಸ್ಕರಿಸುವಂತೆ ಮುಖ್ಯಮಂತ್ರಿ ಜಯಲಲಿತಾ ಸ್ಪೀಕರ್ ಪಿ.ಧನಪಾಲ್ ಅವರಿಗೆ ಆದೇಶ ನೀಡಿದ್ದರು.

ಈ  ಬಗ್ಗೆ ವಿಧಾನಸಭೆಯಲ್ಲಿ ಗೊತ್ತುವಳಿ ಜಾರಿ ಮಂಡಿಸಿದ್ದು,  ಸ್ಪೀಕರ್ 6 ಶಾಸಕರ ವಜಾ ಶಿಕ್ಷೆ ಅವಧಿಯನ್ನು 6 ತಿಂಗಳಿಗೆ ಇಳಿಕೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement