ತೈವಾನ್‌ನಲ್ಲಿ ಪ್ರಬಲ ಭೂಕಂಪ: ಓರ್ವ ಸಾವು. 19 ಜನರಿಗೆ ಗಾಯ
ತೈಪೀ: ತೈವಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, 19 ಜನರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಬೆಳಿಗ್ಗೆ ಸುಮಾರು 10 ಗಂಟೆಯಲ್ಲಿ ಭೂಕಂಪಿಸಿದ್ದು, ಕಟ್ಟಡಗಳು ನೆಲಸಮಗೊಂಡಿವೆ. ಈ ವರ್ಷದಲ್ಲಿ ಉಂಟಾದ ಪ್ರಬಲ ಭೂಕಂಪ ಇದಾಗಿದೆ.
ಕಂಪನದ ತೀರ್ವತೆ ರಿಕ್ಟರ್ ಮಾಪನದಲ್ಲಿ 6.1 ರಷ್ಟು ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.