ನಾಳೆಯಿಂದ ವಿದ್ಯುತ್ ದರ ಹೆಚ್ಚಳ ಸಾಧ್ಯತೆ
ರಾಜ್ಯದ ಜನತೆಗೆ ಬೇಸಿಗೆಯ ಬಿಸಿಲಿನ ಶಾಕ್‌ನೊಂದಿಗೆ ಕರೆಂಟ್ ಶಾಕ್ ನೀಡಲು ಕೆಇಆರ್‌ಸಿ ಮುಂದಾಗಿದೆ.
ಬೆಂಗಳೂರು: ರಾಜ್ಯದ ಜನತೆಗೆ ಬೇಸಿಗೆಯ ಬಿಸಿಲಿನ ಶಾಕ್‌ನೊಂದಿಗೆ ಕರೆಂಟ್ ಶಾಕ್ ನೀಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ(ಕೆಇಆರ್‌ಸಿ) ಮುಂದಾಗಿದ್ದು, ನಾಳೆಯಿಂದ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ.
ವಿದ್ಯುತ್ ದರ ಪ್ರತಿ ಯೂನಿಟ್‌ಗೆ 20ರಿಂದ 25ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಕೆಇಆರ್‌ಸಿ ನಾಳೆ ಅಧಿಕೃತವಾಗಿ ಪರಿಷ್ಕೃತ ದರ ಪ್ರಕಟಿಸಲಿದೆ.
ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳ ಕೋರಿ ಕಳೆದ ಡಿಸೆಂಬರ್‌ನಲ್ಲಿ ಎಲ್ಲ ಎಸ್ಕಾಂಗಳು ಕೆಇಆರ್‌ಸಿಗೆ ಮನವಿ ಮಾಡಿದ್ದವು.