ಅಮೆರಿಕ ಪ್ರತಿನಿಧಿಗಳಿಂದ ಮೋದಿ ಭೇಟಿ
ಅಹಮದಬಾದ್: ಅಮೆರಿಕಗೆ ಭೇಟಿ ನೀಡಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಸಾಧ್ಯವಾಗುತ್ತಿಲ್ಲ. ಆದರೆ ಅಮೆರಿಕ ಪ್ರತಿನಿಧಿಗಳೇ ಮೋದಿ ಅವರನ್ನು ಗುರುವಾರ ಭೇಟಿ ಮಾಡಿದ್ದು, ವ್ಯಾಪಾರೋದ್ಯಮದ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
2002 ಗುಜರಾತ್ ಗಲಭೆಗೆ ಕಾರಣರಾದವರು ಎಂಬ ಆಪಾದನೆ ಮೇಲೆ ನರೇಂದ್ರ ಮೋದಿ ಅವರಿಗೆ ಅಮೆರಿಕ ವೀಸಾ ನೀಡಲು ನಿರಾಕರಿಸಿತ್ತು. ಈ ಹಿನ್ನಲೆಯಲ್ಲಿ ಗುಜರಾತ್ಗೆ ಬಂದಿರುವ ಅಮೆರಿಕದ ಪ್ರತಿನಿಧಿಗಳು ಮೋದಿ ಮನವೊಲಿಸಲು ಮುಂದಾಗಿದ್ದಾರೆ.
ಭಾರತೀಯ-ಅಮೆರಿಕನ್ನರ ಪಬ್ಸಿಕ್ ಪಾಲಿಸಿ ಸಂಸ್ಥೆ ಆಯೋಜಿಸಿರುವ ವ್ಯಾಪಾರೋದ್ಯಮ ಪ್ರವಾಸ ಇದಾಗಿದ್ದು, ಅಮೆರಿಕದ ಪ್ರತಿನಿಧಿಗಳು ಭಾರತಕ್ಕೆ ಭೇಟಿ ನೀಡಿದ್ದಾರೆ.
ಅಮೆರಿಕದ ಇಲ್ಲಿನಾಯ್ಸ್ ರಾಜ್ಯದ ಪ್ರತಿನಿಧಿ ಆರಾನ್ ಸ್ಖಾಕ್ ನೇತೃತ್ವದಲ್ಲಿ ಮೋದಿ ಅವರೊಡನೆ ಸಭೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಗುಜರಾತ್ನಲ್ಲಿ ಬಂಡವಾಳ ಹೂಡಿಕೆ ಮಾಡಲು ಮೋದಿ ಅವರು ಆಯಸ್ಕಾಂತ ಸೃಷ್ಟಿಸಿದ್ದಾರೆ ಎಂದಿರುವ ಅಮೆರಿಕದ ಪ್ರತಿನಿಧಿಗಳು, ವ್ಯಾಪಾರೋದ್ಯಮ ಕುರಿತು ಸರ್ಕಾರಿ ಅಧಿಕಾರಿಗಳು, ಸಂಸದರು ಮತ್ತು ಭಾರತೀಯ ಉದ್ಯಮಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.