ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕ್ರಿಕೆಟಿಗ ಜೆಸ್ಸಿ ರೈಡರ್ ಆರೋಗ್ಯ ಗಂಭೀರ

ತಲೆಗೆ ಏಟು ಬಿದ್ದು ಆಸ್ಪತ್ರೆಯಲ್ಲಿರುವ ನ್ಯೂಜಿಲ್ಯಾಂಡ್‌ನ ಕ್ರಿಕೆಟಿಗ ಜೆಸ್ಸಿ ರೈಡರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

Rashmi Kasaragodu
Updated On : 28 Mar 2013, 1:03 am

ಕ್ರಿಸ್ಟ್‌ಚರ್ಚ್: ತಲೆಗೆ ಏಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನ್ಯೂಜಿಲ್ಯಾಂಡ್‌ನ ಕ್ರಿಕೆಟಿಗ ಜೆಸ್ಸಿ ರೈಡರ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ. ಇಲ್ಲಿನ ಬಾರ್‌ವೊಂದರಲ್ಲಿ ನಡೆದ ಜಗಳದಲ್ಲಿ ಜೆಸ್ಸಿ ತಲೆಗೆ ಗಂಭೀರ ಏಟು ಬಿದ್ದಿತ್ತು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೆಸ್ಸಿ ಕೋಮಾ ಸ್ಥಿತಿಯಲ್ಲಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಇಲ್ಲಿನ ಮರಿವೇಲ್‌ನಲ್ಲಿರುವ ಅಖಿಮನ್ ಬಾರ್‌ನಿಂದ ಹೊರ ಬರುತ್ತಿದ್ದ ವೇಳೆ ಮೂವರು ವ್ಯಕ್ತಿಗಳು ಜೆಸ್ಸಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕ್ರಿಸ್ಟ್‌ಚರ್ಚ್ ಪೊಲೀಸರು ಹೇಳಿದ್ದಾರೆ.

28ರ ಹರೆಯದ ಜೆಸ್ಸಿ ಅವರ ತಲೆಗೆ ತೀವ್ರ ಗಾಯಗಳಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ.

ನ್ಯೂಜಿಲ್ಯಾಂಡ್‌ನಲ್ಲಿ ನಡೆದ ದೇಶೀಯ ಪಂದ್ಯವೊಂದರ ಸೆಮಿಫೈನಲ್‌ನಲ್ಲಿ ಸೋತಿದ್ದ ವೆಲ್ಲಿಂಗ್‌ಟನ್ ತಂಡದ ಸದಸ್ಯರೊಂದಿಗೆ ಜೆಸ್ಸಿ ಬಾರ್‌ನಿಂದ ಹಿಂತಿರುಗುತ್ತಿದ್ದ ವೇಳೆ ಮೊದಲ ಬಾರಿಗೆ ಹಲ್ಲೆ ನಡೆದಿದೆ.

ದುಷ್ಕರ್ಮಿಗಳು ಜೆಸ್ಸಿ ಅವರನ್ನೇ ಹಿಂಬಾಲಿಸಿದ್ದು, ಜತೆಗಿದ್ದ ಇಬ್ಬರು ತಂಡದ ಸದಸ್ಯರು ಹೋದ ಮೇಲೆ ಜೆಸ್ಸಿ ಮೇಲೆ ಎರಡನೇ ಬಾರಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆದಾಗ್ಯೂ, ಹಲ್ಲೆ ನಡೆಸಿದವರ್ಯಾರು? ಯಾಕೆ ನಡೆಸಿದರು? ಎಂಬುದರ ಬಗ್ಗೆ ನ್ಯೂಜಿಲ್ಯಾಂಡ್‌ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement