ಜಾರ್ಖಂಡ್ನಲ್ಲಿ 10 ಮಾವೋಗಳ ಹತ್ಯೆ
ರಾಂಚಿ: ಮಾವೋವಾದಿಗಳು ಹಾಗೂ ತೃತೀಯ ಪ್ರಸ್ತುತಿ ಸಮಿತಿ(ಟಿಪಿಸಿ) ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 10 ಮಂದಿ ಮಾವೋವಾದಿಗಳು ಮೃತಪಟ್ಟಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ಛಾತ್ರ ಜಿಲ್ಲೆಯ ಕುಂದ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ರಮಂದ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಪೊಲೀಸ್ ಅಧೀಕ್ಷಕ ಅನುಪ್ ಬರ್ತಾರೆ ಅವರು, ಕಳೆದ ರಾತ್ರಿ ಮಾವೋವಾದಿ ಹಾಗೂ ಟಿಪಿಸಿ ನಡುವೆ ಹಲವು ಗಂಟೆಗಳ ಕಾಲ ಗುಂಡಿನ ಕಾಳಗ ನಡೆದಿದೆ. ಈ ಸಂದರ್ಭದಲ್ಲಿ 10 ಮಾವೋವಾದಿಗಳು ಮೃತಪಟ್ಟಿದ್ದು, ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿ 6 ಬಂದೂಕುಗಳು ದೊರಕಿವೆ ಎಂದು ತಿಳಿಸಿದ್ದಾರೆ.