ನೋಕಿಯಾಗೆ ನೀಡಿದ್ದ ನೋಟೀಸ್ಗೆ 'ಹೈ'ತಡೆ
ನವದೆಹಲಿ: 2000 ಕೋಟಿ ತೆರಿಗೆ ಪಾವತಿಸಿಲ್ಲ ಎಂಬ ಆರೋಪದ ಮೇಲೆ ನೋಕಿಯಾ ಮೊಬೈಲ್ ಕಂಪನಿಗೆ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟೀಸ್ಗೆ ದೆಹಲಿ ಹೈಕೋರ್ಟ್ ಗುರುವಾರ ಮಧಂತರ ತಡೆ ನೀಡಿದೆ.
ನೋಕಿಯಾ ಕಂಪನಿ ತನ್ನ ವ್ಯಾಪಾರದಲ್ಲಿ ಗಳಿಸಿದ ಲಾಭದಲ್ಲಿ ಪಾವತಿಸಬೇಕಾಗಿದ್ದ 2000ಕೋಟಿ ತೆರಿಗೆಯನ್ನು ಪಾವತಿಸದೇ ವಂಚಿಸಿದೆ ಎಂದು ಆದಾಯ ತೆರಿಗೆ ಇಲಾಖೆ ಆರೋಪಿಸಿ ಮಾಚ್ 21ರಂದು ಒಂದುವಾರದೊಳಗೆ 2000ಕೋಟಿ ತೆರಿಗೆ ಪಾವತಿಸುವಂತೆ ನೋಕಿಯಾಗೆ ನೋಟೀಸ್ ನೀಡಿತ್ತು.
ಆದಾಯ ತೆರಿಗೆ ಇಲಾಖೆ ನೀಡಿರುವ ನೋಟೀಸ್ ಪ್ರಶ್ನಿಸಿ ನೋಕಿಯಾ ಕಂಪನಿ, ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ನೋಟೀಸ್ಗೆ ಮಧ್ಯಂತರ ತಡೆ ನೀಡಿದೆ.
ಕಾನೂನು ಪ್ರಕರಾವಾಗಿ ನೋಕಿಯಾ ತೆರಿಗೆ ಪಾವತಿಸಿದೆ. ತೆರಿಗೆ ಪಾವತಿಸಿಲ್ಲ ಎಂದು ಆರೋಪ ಮಾಡಿರುವ ತೆರಿಗೆ ಇಲಾಖೆ, ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲಿ ಎಂದು ನೋಕಿಯಾ ಕಂಪನಿ ವಕ್ತಾರ ಹೇಳಿದ್ದಾರೆ.
ನೋಕಿಯಾ ಕಂಪನಿ ಪ್ರಾರಂಭಗೊಂಡು 18 ವರ್ಷಗಳಾಗಿದೆ. ಭಾರತದ ಆರ್ಥಿಕತೆ ಹೆಚ್ಚಾಗುವುದರಲ್ಲಿ ನೋಕಿಯಾ ಕೊಡುಗೆ ಅಪಾರ. ಕೋರ್ಟ್ ಆದಾಯ ತೆರಿಗೆ ಇಲಾಖೆಗೆ ದಾಖಲೆ ನೀಡುವಂತೆ ಆದೇಶಿಸಿದ್ದು, ಈ ಸಂಬಂಧ ಈಗಾಗಲೇ ಆದಾಯ ತೆರಿಗೆ ಇಲಾಖೆಯವರು ತನಿಖೆ ಕೈಗೊಂಡಿದ್ದಾರೆ. ಚೆನ್ನೈನಲ್ಲಿರುವ ನೋಕಿಯಾ ಶೋ ರೂಂಗೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.