ಭಗ್ನ ಪ್ರೇಮಿಯಿಂದ ಇರಿತಕ್ಕೊಳಗಾಗಿದ್ದ ಯುವತಿ ಸಾವು
ಭಗ್ನ ಪ್ರೇಮಿಯಿಂದ ಚಾಕುವಿನಿಂದ ಇರಿತಕ್ಕೆ ಒಳಗಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಯುವತಿ..
ಉಡುಪಿ: ಭಗ್ನ ಪ್ರೇಮಿಯಿಂದ ಚಾಕುವಿನಿಂದ ಇರಿತಕ್ಕೆ ಒಳಗಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಯುವತಿ ಕೊನೆಯುಸಿರೆಳೆದಿದ್ದಾರೆ.
ತೀರ್ಥಹಳ್ಳಿಯ ಬಾಳೇಬೈಲಲ್ಲಿರುವ ಪದವಿ ಪೂರ್ವ ಕಾಲೇಜ್ನ ಬಿಕಾಂ ವಿದ್ಯಾರ್ಥಿನಿ ಸೋನಂಗೆ ಆಕೆಯ ಪ್ರಿಯಕರ ಅಭಿಷೇಕ್, ಕಾಲೇಜ್ ಆವರಣದಲ್ಲೇ ಸೋನಂಗೆ ಒಂಬತ್ತು ಬಾರಿ ಚಾಕುವಿನಿಂದ ಇರಿದು, ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಸೋನಂ ಹಾಗೂ ವಿಷ ಸೇವಿಸಿದ್ದ ಅಭಿಷೇಕ್ ಇಬ್ಬರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆಯೇ ಸೋನಂ ಕೊನೆಯುಸಿರೆಳೆದಿದ್ದಾರೆ ಎಂದು ತೀರ್ಥಹಳ್ಳಿ ಪೊಲೀಸರು ತಿಳಿಸಿದ್ದಾರೆ.