ಮತ್ತೆ ಆಸ್ಪತ್ರೆಗೆ ದಾಖಲಾದ ಮಂಡೇಲ
ಜೋನ್ಸ್ಬರ್ಗ್: ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲರನ್ನು ಕಳೆದ ರಾತ್ರಿ ಮತ್ತೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವೈದ್ಯರು ಮಂಡೇಲರನ್ನು ಪರೀಕ್ಷಿಸುತ್ತಿದ್ದು, ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಝೂಹ ಸಂಸತ್ನ ವಕ್ತಾರ ಮಾಕ್ ಮಹಾರಾಜ ಹೇಳಿದ್ದಾರೆ.
ಮಂಡೇಲರವರು ಶೀಘ್ರ ಗುಣಮುಖರಾಗಲಿ ಎಂದು ಅಧ್ಯಕ್ಷ ಜಾಕಬ್ ಝಮರವರು ಹಾರೈಸಿದ್ದು, ಮಂಡೇಲರ ಆರೋಗ್ಯ ಶೀಘ್ರ ಚೇತರಿಸಿಕೊಳ್ಳಲಿ ಎಂದು ದೇವರನ್ನು ಪ್ರಾರ್ಥಿಸಿ ಎಂದು ದಕ್ಷಿಣ ಆಫ್ರಿಕಾದ ಜನರಲ್ಲಿ ಮನವಿ ಮಾಡಿದ್ದಾರೆಂದು ವಕ್ತಾರ ಮಾಕ್ ತಿಳಿಸಿದ್ದಾರೆ.
ಶ್ವಾಸಕೋಶ ತೊಂದರೆಯಿಂದಾಗಿ ಡಿ.8.2012ರಲ್ಲಿ ಪ್ರಿಟೊರಿಯ ಆಸ್ಪತ್ರೆಗೆ ದಾಖಲಾಗಿದ್ದ ಅವರು ಡಿ.26ರಂದು ಗುಣಮುಖರಾಗಿ, ಮನೆಗೆ ತೆರಳಿದ್ದರು.