ಆತ್ಮಾಹುತಿ ಬಾಂಬ್ ಸ್ಫೋಟ 6 ಸಾವು
ಪೇಶ್ವಾರ್: ಪಾಕಿಸ್ತಾನದ ಪೇಶಾವರ್ ಭದ್ರತಾ ಚೆಕ್‌ಪೋಸ್ಟ್ ಬಳಿ ಆತ್ಮಾಹುತಿ ಬಾಂಬ್ ಸ್ಫೋಟಿಸಿದ ಪರಿಣಾಮ 6 ಜನರು ಸಾವುನ್ನಪ್ಪಿದ್ದು, 10 ಜನ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಪೇಶ್ವಾರ್‌ನ ಸಡ್ಡಾರ್ ಕಂಟ್ಟ್ ಪ್ರದೇಶದಲ್ಲಿರುವ ಭದ್ರತಾ ಚೆಕ್ ಪೋಸ್ಟ್ ಬಳಿ ಹಿರಿಯ ಕಂಮಾಂಡರ್‌ನ್ನು ಗುರಿಯಾಗಿಸಿಟ್ಟುಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಡ್ಡಾರ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಗಳು ಪರಿಶೀಲನೆ ನಡೆಸಬೇಕಾದರೆ ವ್ಯಕ್ತಿಯೋಬ್ಬ ಆತ್ಮಾಹುತಿ ಬಾಂಬ್ ಸ್ಫೋಟಿಸಿದ್ದಾನೆ ಎಂದು ತಿಳಿದು ಬಂದಿದೆ.
ಗಡಿ ಭಾಗದ ಭದ್ರತಾ ಕಮಾಂಡರ್ ಪ್ರಾಣಪಾಯದಿಂದ ಪಾರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮಹಿಳೆಯರು ಸೇರಿದಂತೆ ಆರು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. 10 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ಜನ ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ.