ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಡ್ರಗ್ಸ್ ಪ್ರಕರಣ: ಪೇದೆ ಹುದ್ದೆಯಿಂದ ರಾಮ್‌ಸಿಂಗ್ ವಜಾ

Mainashree
Updated On : 29 Mar 2013, 6:38 am

ಚಂಡೀಗಢ: ನಿಷೇಧಿತ ಮಾದಕ ವಸ್ತು ಸೇವಿಸಿದ ಬಗ್ಗೆ ತಪ್ಪೊಪ್ಪಿಕೊಂಡ ಅಂತರಾಷ್ಟ್ರೀಯ ಬಾಕ್ಸ್‌ರ್ ರಾಮ್ ಸಿಂಗ್ ಅವರನ್ನು ಹೆಡ್‌ಕಾನ್‌ಸ್ಟೇಬಲ್ ಹುದ್ದೆಯಿಂದ ವಜಾಗೊಳಿಸಲಾಗಿದೆ.

ಎರಡು ದಿನಗಳ ಹಿಂದೆಯಷ್ಟೆ ಪ್ರಕರಣದ ಮತ್ತೊಬ್ಬ ಆರೋಪಿ ಸರ್ಬಜಿತ್ ಸಿಂಗ್ ಅವರನ್ನು ವಜಾಗೊಳಿಸಿದ ಬೆನ್ನಲ್ಲೆ ಪಂಜಾಬ್ ಪೊಲೀಸರು, ರಾಮ್‌ಸಿಂಗ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದಾರೆ.

ಸೂಪರ್ ಹೇವಿವೇಟ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಎನಿಸಿರುವ ಮತ್ತು ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮ್‌ಸಿಂಗ್, ವಿಜೇಂದರ್ ಜತೆ ಸೇರಿ ಮಾದಕ ವಸ್ತು ಸೇವಿಸಿರುವ ಬಗ್ಗೆ ಹೇಳಿಕೊಂಡಿದ್ದರು.

ರಾಮ್‌ಸಿಂಗ್ ನೀಡಿರುವ ಹೇಳಿಕೆಯ ಹಿನ್ನಲೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಂಜಾಬ್‌ನ ಮೊಹಲಿ ಜಿಲ್ಲೆಯ ಜಿರಾಕ್ಪುರ ನಗರದ ಹೊರ ವಲಯದಲ್ಲಿರುವ ಭಾರತೀಯ ಮೂಲದ ನಿವಾಸಿ ಅನೂಪ್ ಸಿಂಗ್ ಮನೆಯಲ್ಲಿ ರು. 130 ಕೋಟಿ ಮೊತ್ತದ ಹೆರಾಯಿನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹೆರಾಯಿನ್ ವಸಪಡಿಸಿಕೊಂಡ ನಿವಾಸದ ಸಮೀಪವೇ ವಿಜೇಂದರ್ ಸಿಂಗ್ ಪತ್ನಿಯ ಕಾರು ಪತ್ತೆಯಾಗಿತ್ತು. ಇದರೊಂದಿಗೆ ಭಾರತದ ಈ ಇಬ್ಬರು ಬಾಕ್ಸರ್‌ಗಳು ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.

'ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ನಾಲ್ಕರಿಂದ ಐದು ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ' ಎಂದು ಮಾತ್ರ ಹೇಳಿರುವ ಪೊಲೀಸರು ವಿಜೇಂದಂದರ್ ವಿಚಾರಣೆಗೊಳಪಡಿಸುವ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.

ಏತನ್ಮಧ್ಯೆ, ಮಾದಕ ವಸ್ತು ತಯಾರಿಸುತ್ತಿರುವ ಫ್ಯಾಕ್ಟರಿ ಆರ್ಜುನ್ ಪ್ರಶಸ್ತಿ ಪಡೆದಿರುವ ಕುಸ್ತಿಪಟುವೊಬ್ಬರ ಸಂಬಂಧಿಯೊಬ್ಬರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement