ಮುಷರಫ್ ಜಾಮೀನು ಅವಧಿ ವಿಸ್ತರಣೆ
ನಾಲ್ಕು ವರ್ಷದ ಬಳಿಕ ಸ್ವದೇಶಕ್ಕೆ ಮರಳಿದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಜಾಮೀನು ಅವಧಿಯನ್ನು...
ಕರಾಚಿ: ನಾಲ್ಕು ವರ್ಷದ ಬಳಿಕ ಸ್ವದೇಶಕ್ಕೆ ಮರಳಿದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಜಾಮೀನು ಅವಧಿಯನ್ನು ಪಾಕ್ ನ್ಯಾಯಾಲಯ 15 ದಿನಗಳವರೆಗೆ ವಿಸ್ತರಿಸಿದೆ.
ಕಾನೂನು ಉಲ್ಲಂಘನೆ ಅಪರಾಧದ ಮೇಲೆ ಮುಷರಫ್ ಅವರನ್ನು ಬಂಧಿಸಲು ಆದೇಶ ಹೊರಡಿಸಲಾಗಿತ್ತು. ಆದರೆ ಮುಷರಫ್ ಅವರು ಸ್ವದೇಶಕ್ಕೆ ಮರಳುವ ಮೊದಲೇ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಶುಕ್ರವಾರ ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ಮುಷರಫ್ ಅವರಿಗೆ 15 ದಿನಗಳವರೆಗೆ ಜಾಮೀನು ಅವಧಿಯನ್ನು ವಿಸ್ತರಿಸಿದ್ದು, ನ್ಯಾಯಾಲಯದ ಅನುಮತಿ ಇಲ್ಲದೇ ದೇಶವನ್ನು ತೊರೆಯಬಾರದು ಎಂದು ನಿಬಂಧನೆ ಹಾಕಿದೆ.
ಇಂದು ನ್ಯಾಯಾಲಯದಲ್ಲಿ ವಿಚಾರಣೆ ಮುಗಿಸಿ ಮುಷರಫ್ ಅವರು ಹೊರಬರುವಾಗ ವಕೀಲರೊಬ್ಬರು ಅವರ ಮೇಲೆ ಪಾದರಕ್ಷೆ ಎಸೆದಿದ್ದಾರೆ. ವಕೀಲರ ಸಂಘಟನೆಗಳು ಮುಷರಫ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.