ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಯುಪಿಎಗೆ ಬಹುಮತ ಇಲ್ಲ, ಪ್ರಧಾನಿ ಕೆಳಗಿಳಿಯಲಿ: ಟಿಎಂಸಿ

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬಹುಮತ ಕುಸಿದಿದ್ದು, ಈ ಕೂಡಲೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ...

Mainashree
Updated On : 29 Mar 2013, 7:16 am

ಕೊಲ್ಕತಾ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬಹುಮತ ಕುಸಿದಿದ್ದು, ಈ ಕೂಡಲೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು  ತೃಣಮೂಲ ಕಾಂಗ್ರೆಸ್(ಟಿಎಂಸಿ) ಶುಕ್ರವಾರ ಒತ್ತಾಯಿಸಿದೆ.

ಡಿಎಂಕೆ ತನ್ನ ಬೆಂಬಲ ವಾಪಸ್ ಪಡೆದಿದ್ದು, ಯುಪಿಎ ಬಲ ಕುಸಿದಿದೆ. ಆದ್ದರಿಂದ ಯುಪಿಎ ಸರ್ಕಾರ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಮುಖುಲ್ ರಾಯ್ ತಿಳಿಸಿದ್ದಾರೆ.

ಯುಪಿಎ ಸರ್ಕಾರ ಡೀಸೆಲ್, ಪೆಟ್ರೋಲ್ ಸೇರಿದಂತೆ ಇತರ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ಸಾಮಾನ್ಯ ಜನರು ಪರದಾಡುವಂತೆ ಮಾಡಿದೆ. ಜನ ವಿರೋಧಿ ಸರ್ಕಾರ ಬೇಕಾಗಿಲ್ಲ. ಯುಪಿಎ ಅಧಿಕಾರ ಬಿಟ್ಟು ತೊಲಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಚಿಲ್ಲರೆ ಕ್ಷೇತ್ರದಲ್ಲಿ ನೇರ ಬಂಡವಾಳ ಹೂಡಿಕೆ ವಿರೋಧಿಸಿ ತೃಣಮೂಲ ಕಾಂಗ್ರೆಸ್ ಯುಪಿಎಗೆ ನೀಡಿದ್ದ ಬಾಹ್ಯ ಬೆಂಬಲವನ್ನು ವಾಪಸ್ ಪಡೆದಿತ್ತು. ಈಗ ಕರುಣಾನಿಧಿ ನೇತೃತ್ವದ ಡಿಎಂಕೆ ಪಕ್ಷ ಬೆಂಬಲ ವಾಪಸ್ ಪಡೆದಿದೆ. ಇದರಿಂದ ಯುಪಿಎ ಅಲ್ಪಮತಕ್ಕಿಳಿದಿದೆ ಎಂದು ರಾಯ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement