ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಯುಪಿಎಗೆ ಬೆಂಬಲ ಮುಂದುವರಿಕೆ: ಮುಲಾಯಂ

ಸಮಾಜವಾದಿ ಪಕ್ಷ ಯುಪಿಎ ಸರ್ಕಾರಕ್ಕೆ ನೀಡಿರುವ ಬಾಹ್ಯ ಬೆಂಬಲವನ್ನು ಮುಂದುವರಿಸಲಿದೆ ಎಂದು...

Mainashree
Updated On : 29 Mar 2013, 4:31 am

ನವದೆಹಲಿ: ಸಮಾಜವಾದಿ ಪಕ್ಷ ಯುಪಿಎ ಸರ್ಕಾರಕ್ಕೆ ನೀಡಿರುವ ಬಾಹ್ಯ ಬೆಂಬಲವನ್ನು ಮುಂದುವರಿಸಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಶುಕ್ರವಾರ ಹೇಳಿದ್ದಾರೆ.

ಈವರೆಗೆ ಪಕ್ಷದಲ್ಲಿ ಈ ಕುರಿತು ಚರ್ಚಿಸಿರಲಿಲ್ಲ. ಆದರೆ ನಿನ್ನೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಸಮಾಜವಾದಿ ಪಕ್ಷ ಯುಪಿಎಗೆ ನೀಡಿರುವ ಬಾಹ್ಯ ಬೆಂಬಲವನ್ನು ಹಿಂತೆಗೆದುಕೊಳ್ಳಲಿದೆ ಎಂದು ಹೇಳಿದ್ದರು. ಪ್ರಧಾನಿ ಅವರು ಯಾವ ಉದ್ದೇಶವಿಟ್ಟುಕೊಂಡು ಹೇಳಿಕೆ ನೀಡಿದರೋ ತಿಳಿಯದು. ಆದರೆ ನಾವು ಬೆಂಬಲ ವಾಪಸ್ ಪಡೆಯುವುದಿಲ್ಲ ಎಂದು ಮುಲಾಯಂ ಸ್ಪಷ್ಟಪಿಡಿಸಿದ್ದಾರೆ.

ಎರಡು ದಿನಗಳ ಹಿಂದೆ, ಕಾಂಗ್ರೆಸ್‌ಗೆ ಬೆಂಬಲಿಸಿರುವ ಇತರೆ ಪಕ್ಷಗಳಿಗೆ ಯುಪಿಎ ಸರ್ಕಾರ ಮೋಸ ಮಾಡಿದೆ. ಈಗಾಗಲೇ ಕರುಣಾನಿಧಿ ಅವರ ಪಕ್ಷ ಕಾಂಗ್ರೆಸ್‌ಗೆ ಬೆಂಬಲಿಸಿದ್ದರಿಂದ, ಡಿಎಂಕೆ ಪಕ್ಷದ ಮಂತ್ರಿಗಳನ್ನು 2ಜಿ ಹಗರಣ ಆರೋಪದ ಮೇಲೆ ಜೈಲಿಗಟ್ಟಿದರು. ಇಂತಹ ಹಲವಾರು ಉದಾಹರಣೆಗಳಿವೆ. ಸುಳ್ಳು ಆರೋಪದಡಿ ಬಾಹ್ಯ ಪಕ್ಷಗಳ ಸದಸ್ಯರನ್ನು ಜೈಲಿಗಟ್ಟುವ ಹುನ್ನಾರ ನಡೆಸುತ್ತಿದೆ ಎಂದು ಮುಲಾಯಂ ಆಪಾದಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಧಾನಿ ಅವರು ನಿನ್ನೆ ಎಸ್‌ಪಿ ಬೆಂಬಲ ವಾಪಸ್ ಪಡೆಯಲಿದೆ ಎಂದಿದ್ದರು.

ಇತ್ತಾ ಲಕ್ನೋಗೆ ಭೇಟಿ ನೀಡಿರುವ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ, ಉತ್ತರ ಪ್ರದೇಶ ರಾಜ್ಯದ ಅಭಿವೃದ್ಧಿಗೆ ಯುಪಿಎ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.

ಶುಕ್ರವಾರ ಲಕ್ನೋಗೆ ಭೇಟಿ ನೀಡಿ 300 ಬ್ಯಾಂಕ್ ಬ್ರಾಂಚ್‌ಗಳನ್ನು ಉದ್ಘಾಟಿಸಿ ಮಾತನಾಡಿದ ಚಿದಂಬರಂ, ಯುಪಿಎ ಸರ್ಕಾರ ಉತ್ತರ ಪ್ರದೇಶದ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಅಭಿವೃದ್ಧಿ 18,500 ಕೋಟಿ ವೆಚ್ಚದ 24 ಕೇಂದ್ರ ಯೋಜನೆಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಉತ್ತರ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಮತ್ತು ಅವರ ತಂದೆ ಮುಲಾಯಂ ಅವರಿಗೆ ಭರವಸೆ ನೀಡುತ್ತೇನೆ ಎಂದು ಚಿದಂಬರಂ ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement