ಜನತಂತ್ರ ಯಾತ್ರೆ ಆರಂಭಿಸಿದ ಅಣ್ಣಾ
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಭಾನುವಾರ ಜನತಂತ್ರ...
ಅಮೃತಸರ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಭಾನುವಾರ ಜನತಂತ್ರ ಯಾತ್ರೆ ಆರಂಭಿಸಿದ್ದಾರೆ.
ತಮ್ಮ ಬೆಂಬಲಿಗರೊಂದಿಗೆ ಯಾತ್ರೆ ಆರಂಭಿಸಿದ 75ರ ಹರೆಯದ ಅಣ್ಣಾ, ಯಾತ್ರೆಗೆ ಮುನ್ನ ದುರ್ಗಿಯಾನ ಮಂದಿರ, ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದು, ಜಲಿಯನ್ವಾಲಾಭಾಗ್ನ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಜಲಿಯನ್ವಾಲಾಭಾಗ್ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಹಜಾರೆ, ದೇಶವನ್ನು ಬದಲಿಸಲು ಜನರು ಒಟ್ಟಾಗಿ ಆಂದೋಲನ ನಡೆಸಬೇಕು ಎಂದಿದ್ದಾರೆ.
ಅದೇ ವೇಳೆ ಇನ್ನು 5 ತಿಂಗಳುಗಳ ಬಳಿಕ ದೆಹಲಿಯಲ್ಲಿರುವ ರಾಮ್ಲೀಲಾ ಮೈದಾನದಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಯನ್ನು ಕೈಗೊಳ್ಳುವುದಾಗಿ ಹೇಳಿದ ಹಜಾರೆ, ಇದು ಭ್ರಷ್ಟ ಸರ್ಕಾರದ ಹಣೆ ಬರಹವನ್ನು ನಿರ್ಧರಿಸಲಿದೆ ಎಂದಿದ್ದಾರೆ.
ಜನತಂತ್ರ ಯಾತ್ರೆಯ ಮೊದಲ ಘಟ್ಟದಲ್ಲಿ ಹಜಾರೆ ಪಂಜಾಬ್ನಲ್ಲಿ 8 ಸಾರ್ವಜನಿಕ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.