ಶಾರುಖ್ ಮೇಲಿನ ನಿಷೇಧ ಮುಂದುವರಿಸಲು ಎಂಸಿಎ ನಿರ್ಧಾರ
ಕಳೆದ ಐಪಿಎಲ್ನಲ್ಲಿ ವಾಂಖಡೆ ಕ್ರೀಡಾಂಗಣದ ಸಿಬ್ಬಂಧಿಯೊಂದಿಗೆ ಕಿತ್ತಾಡಿಕೊಂಡಿದ್ದ ಬಾಲಿವುಡ್ ನಟ ಹಾಗೂ ಕೋಲ್ಕತಾ ..
ಮುಂಬೈ: ಕಳೆದ ಐಪಿಎಲ್ನಲ್ಲಿ ವಾಂಖಡೆ ಕ್ರೀಡಾಂಗಣದ ಸಿಬ್ಬಂದಿಯೊಂದಿಗೆ ಕಿತ್ತಾಡಿಕೊಂಡಿದ್ದ ಬಾಲಿವುಡ್ ನಟ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರುಖ್ ಖಾನ್ ವಿರುದ್ಧ 5 ವರ್ಷಗಳ ಕಾಲ ನಿಷೇಧ ಹೇರಿದ್ದು, ಈ ಬಾರಿಯ ಐಪಿಲ್ ಆವೃತ್ತಿ ವೇಳೆಯೂ ಆ ನಿಷೇಧ ಮುಂದುರಿಸಲು ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ) ನಿರ್ಧರಿಸಿದೆ.
ಈ ಕುರಿತು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿರುವ ಎಂಸಿಎ ಅಧ್ಯಕ್ಷ ರವಿ ಸಾವಂತ್, ಶಾರುಖ್ ವಿರುದ್ಧ ಕಳೆದ ವರ್ಷ ತೆಗೆದುಕೊಳ್ಳಲಾಗಿರುವ ನಮ್ಮ ನಿರ್ಧಾರವನ್ನು ಮುಂದುವರಿಸಲಿದ್ದು, ಈ ಆವೃತ್ತಿಯಲ್ಲೂ ಅವರಿಗೆ ವಾಂಖಡೆ ಕ್ರೀಡಾಂಗಣದ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ ಶಾರುಖ್ ಖಾನ್ ಅವರ ವತರ್ನೆಯಿಂದಾಗಿ ಮುಂಬೈ ಕ್ರಿಕೆಟ್ ಸಂಸ್ಥೆಯ ವ್ಯವಸ್ಥಾಪಕ ಸಮಿತಿಯು ನಿಷೇಧ ನಿರ್ಧಾರವನ್ನು ತೆಗೆದುಕೊಂಡಿತ್ತು, ಆ ನಿರ್ಧಾರವನ್ನು ಈ ವರ್ಷವೂ ಮುಂದುವರಿಸಲಿದ್ದು, ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.