ಪರಿಷತ್ ಸ್ಥಾನಕ್ಕೆ ಮೋಹನ್ ಲಿಂಬಿಕಾಯಿ ರಾಜಿನಾಮೆ
ಬಿಜೆಪಿ ತೊರೆದು ಕೆಜೆಪಿ ಸೇರಲು ನಿರ್ಧರಿಸಿರುವ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ ಅವರು ಸೋಮವಾರ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ...
ಬೆಂಗಳೂರು: ಬಿಜೆಪಿ ತೊರೆದು ಕೆಜೆಪಿ ಸೇರಲು ನಿರ್ಧರಿಸಿರುವ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ ಅವರು ಸೋಮವಾರ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಲಿಂಬಿಕಾಯಿ ಅವರು ಇಂದು ಮಧ್ಯಾಹ್ನ 12.30ರ ಸುಮಾರಿಗೆ ವಿಧಾನ ಪರಿಷತ್ ಸಭಾಪತಿ ಶಂಕರಮೂರ್ತಿ ಅವರನ್ನು ಭೇಟಿ ಮಾಡಿ ತಮ್ಮ ರಾಜಿನಾಮೆ ಪತ್ರ ಸಲ್ಲಿಸಿದ್ದು, ಅವರ ರಾಜಿನಾಮೆಯನ್ನು ಸಭಾಪತಿಗಳು ಅಂಗೀಕರಿಸಿದ್ದಾರೆ.
ರಾಜಿನಾಮೆ ಬಳಿಕ ಲಿಂಬಿಕಾಯಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೆಜೆಪಿ ಸೇರಲಿದ್ದು, ಹುಬ್ಬಳ್ಳಿ-ಧಾರವಾಡದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
ಇನ್ನು ಶಿವರಾಜ್ ಸಜ್ಜನ್ ಅವರು ಸಹ ಬಿಜೆಪಿಗೆ ಗುಡ್ಬೈ ಹೇಳುತ್ತಿದ್ದು, ಏಪ್ರಿಲ್ 4ಕ್ಕೆ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಿ ಕೆಜೆಪಿ ಸೇರಿಕೊಳ್ಳುತ್ತಿದ್ದಾರೆ.