ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಮೋದಿ

ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ..

Lingaraj Badiger
Updated On : 2 May 2013, 12:59 pm

ಮಂಗಳೂರು: ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.

ಮಂಗಳೂರಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳುತ್ತಾರೆ. ಆದರೆ ನಾನು ಮನಮೋಹನ್ ಸಿಂಗ್ ಅವರಿಗೆ ಕೇಳ್ತೇನಿ ದೇಶದಲ್ಲಿ ಈಗ ಏನಾಗುತ್ತಿದೆ? ಕೃಷಿಗಾಗಿ ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ಮೋದಿ ಪ್ರಶ್ನಿಸಿದರು.

ದೆಹಲಿಯಲ್ಲಿ ಕುಳಿತಿರುವ ಕೇಂದ್ರ ಸರ್ಕಾರಕ್ಕೆ ಒಂದೇ ಒಂದು ಅಜೆಂಡಾ ಇದೆ. ಅದು ಪಿಂಕ್ ರೆವೆಲ್ಯೂಷನ್ ಅಂತ. ನಾವು ಗ್ರೀನ್ ರೆಲೆಲ್ಯೂಷನ್ ಕೇಳಿದ್ದೇವೆ, ಮಿಲ್ಕ್ ರೆವೆಲ್ಯೂಷನ್ ಕೇಳಿದ್ದೇವೆ. ಆದರೆ ಈ ಪಿಂಕ್ ರೆವೆಲ್ಯೂಷನ್ ಅಂತ ಯಾವತ್ತಾದ್ರು ಕೇಳಿದ್ದಾರಾ? ಪಿಂಕ್ ಲೆವೆಲ್ಯೂಷನ್ ಅಂದ್ರೆ ಗೋಹತ್ಯೆ ಮತ್ತು ಅದರ ಮಾಂಸದ ರಫ್ತುಮಾಡುವುದು. ಪ್ರಾಣಿಗಳ ಮಾಂಸ ರಫ್ತಿಗಾಗಿ ಪಿಂಕ್ ರೆವೆಲ್ಯೂಷನ್‌ಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೋದಿ ಆರೋಪಿಸಿದರು. ಅಲ್ಲದೆ ಮಾಂಸಕ್ಕಾಗಿ ಬಾಂಗ್ಲಾ ದೇಶಕ್ಕೆ ಗೋವುಗಳ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋವುಗಳ ವಧೆಗೆ ಅನುಮತಿ ನೀಡುವುದಾಗಿ ರಾಜ್ಯದ ನಾಯಕರೊಬ್ಬರು ಆಮಿಷ ನೀಡಿದ್ದಾರೆ. ಈಗ ನೀವೇ ಹೇಳಿ ಗೋಹತ್ಯೆ ಮಾಡುವ ಸರ್ಕಾರವನ್ನು ನಾವು ಆಯ್ಕೆ ಮಾಡಬೇಕಾ ಎಂದು ಮೋದಿ ಮತದಾರರನ್ನು ಪ್ರಶ್ನಿಸಿದರು ಮತ್ತು ಕಾಂಗ್ರೆಸ್‌ನ ವೋಟ್ ಬ್ಯಾಂಕ್ ರಾಜಕಾರಣ ತುಂಬಾ ಅಪಾಯಕಾರಿ ಎಂದು ಎಚ್ಚರಿಸಿದರು.

ಕಳೆದ 50 ವರ್ಷಗಳಿಂದ ದೇಶದಲ್ಲಿ ಕಾಂಗ್ರೆಸ್ ದುರಾಡಳಿತವನ್ನೇ ನಡೆಸಿದೆ. ನೀವು ಇನ್ನೂ ದುರಾಡಳಿತವನ್ನೇ ಬಯಸುತ್ತೀರಾ ಎಂದು ಮೋದಿ ಪ್ರಶ್ನಿಸಿದರು.  

ಇದೇ ವೇಳೆ, ಪಾಕ್ ಜೈಲಿನಲ್ಲಿ ಸಹ ಕೈದಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಇಂದು ಕೊನೆಯುಸಿರೆಳೆದ ಭಾರತೀಯ ಕೈದಿ ಸರಬ್ಜಿತ್ ಸಿಂಗ್ ವಿಷಯವನ್ನು ಪ್ರಸ್ತಾಪಿಸಿದ ಮೋದಿ, ಗಲ್ಲು ಶಿಕ್ಷೆಗೆ ಒಳಗಾದ ಕೈದಿಯನ್ನು ವಿಶೇಷ ಸೆಲ್‌ನಲ್ಲಿ ಇಡಬೇಕು. ವಿಶ್ವದ ಎಲ್ಲ ಜೈಲುಗಳಲ್ಲೂ ಗಲ್ಲು ಶಿಕ್ಷೆಗೆ ಒಳಗಾದವರನ್ನು ಪ್ರತ್ಯೇಕವಾಗಿಯೇ ಇಡಲಾಗುತ್ತದೆ. ಆದರೆ ಪಾಕಿಸ್ತಾನದಲ್ಲಿ ಈ ರೀತಿ ಮಾಡಲಾಗಿಲ್ಲ. ಬದಲಾಗಿ ಭಾರತೀಯ ಕೈದಿಯನ್ನು ಹತ್ಯೆ ಮಾಡಲಾಗಿದೆ. ಇದು ನ್ಯಾಯಾಂಗದ ಹೊರಗಿನ ಕೊಲೆಯಾಗಿದೆ. ಈ ಎಲ್ಲ ಗೊತ್ತಿದ್ದರು ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೆ ಸುಮ್ಮನಾಗಿದೆ. ಅಲ್ಲದೆ ಸರಬ್ಜಿತ್ ಸಿಂಗ್ ಸಂಬಂಧಿಕರ ನೆರವಿಗೂ ಸರ್ಕಾರ ಬರುತ್ತಿಲ್ಲ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement