ಸರಬ್ಜಿತ್ ಸಿಂಗ್ ಕುಟುಂಬಕ್ಕೆ 25 ಲಕ್ಷ ಪರಿಹಾರ
ಪಾಕಿಸ್ತಾನದ ಜೈಲಿನಲ್ಲಿ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಇಂದು ಬೆಳಗಿನ ಜಾವ ಸಾವನ್ನಪ್ಪಿದ ಭಾರತೀಯ ಕೈದಿ ಸರಬ್ಜಿತ್ ಸಿಂಗ್ ಕುಟುಂಬಕ್ಕೆ...
ನವದೆಹಲಿ: ಪಾಕಿಸ್ತಾನದ ಜೈಲಿನಲ್ಲಿಮಾರಣಾಂತಿಕ ಹಲ್ಲೆಗೆ ಒಳಗಾಗಿ ಇಂದು ಬೆಳಗಿನಜಾವ ಸಾವನ್ನಪ್ಪಿದಭಾರತೀಯ ಕೈದಿಸರಬ್ಜಿತ್ ಸಿಂಗ್ ಕುಟುಂಬಕ್ಕೆ ಭಾರತ ಸರ್ಕಾರ25 ಲಕ್ಷಪರಿಹಾರ ಪ್ರಕಟಿಸಿದೆ.
ಸರಬ್ಜಿತ್ ಸಿಂಗ್ ಸಾವಿನಬಗ್ಗೆ ವಿಷಾದವ್ಯಕ್ತಪಡಿಸಿರುವ ಪ್ರಧಾನಮಂತ್ರಿ ಮನ್‌ಮೋಹನ್ಸಿಂಗ್ ಅವರುಆತನ ಕುಟುಂಬಕ್ಕೆ25 ಲಕ್ಷರುಪಾಯಿ ಪರಿಹಾರಘೋಷಿಸಿದ್ದಾರೆ.
ಸಂತಾಪ ಸೂಚಿಸಿದ ಪ್ರಧಾನಿ
ಭಾರತೀಯ ಕೈದಿ ಸರಬ್ಜಿತ್ಸಿಂಗ್ ಸಾವಿಗೆಸಂತಾಪ ಸೂಚಿಸಿರುವಪ್ರಧಾನಿ ಸಿಂಗ್, ಆತನ ಸಾವು ನನ್ನಮನಸ್ಸಿಗೆ ತುಂಬಾ ಆಘಾತ ಹಾಗು ನೋವುಂಟುಮಾಡಿದೆ. ಇಂದೊಂದು ದುರಾದೃಷ್ಟಕರ ಸಂಗತಿ ಎಂದುವಿಷಾದ ವ್ಯಕ್ತಪಡಿಸಿದ್ದಾರೆ.
ಭಾರತದ ಹೆಮ್ಮೆ ಪುತ್ರನಾಗಿದ್ದಸರಬ್ಜಿತ್ ಸಿಂಗ್ ಅಸಂಘಟಿತ ವ್ಯಕ್ತಿತ್ವವನ್ನು ಹಾಗು ಅನ್ಯಾಯವನ್ನು ಖಂಡಿಸುವ ಮನೋಸ್ಥೈರ್ಯಹೊಂದಿದ್ದರು ಎಂದು ಸರಬ್ಜಿತ್ ಬಗ್ಗೆ ಪ್ರಧಾನಿಹೆಮ್ಮೆಯ ಮಾತುಗಳಾಡಿದ್ದಾರೆ.
ಸರಬ್ಜಿತ್ ಮೃತದೇಹವನ್ನು ತಾಯ್ನಾಡಿಗೆತರಿಸುವ ಎಲ್ಲಾಪ್ರಕ್ರಿಯೆಗಳು ಸಂಪೂರ್ಣ ಮುಗಿದಿದೆ. ಸರಬ್ಜಿತ್ ಸಿಂಗ್ಸಾವಿನ ನೋವನ್ನುತಡೆದುಕೊಳ್ಳುವ ಶಕ್ತಿ ಭಗವಂತ ಆತನ ಕುಟುಂಬವರ್ಗಕ್ಕೆ ನೀಡಲಿ ಎಂದು ಆಶಿಸಿದ್ದಾರೆ.