ಪ್ರಚೋದನಕಾರಿ ಭಾಷಣ: ಒವೈಸಿಗೆ ನೋಟಿಸ್
ಹೈದರಬಾದ್: ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಶಾಸಕ ಅಕ್ಬರುದ್ದೀನ್ ಒವೈಸಿಗೆ ನೀಡಲಾಗಿದ್ದ ಬಂಧನ ರಹಿತ ವಾರಂಟ್‌ನ್ನು ಮಾಜಿಸ್ಟ್ರೆಟ್ ಕೋರ್ಟ್ ಶನಿವಾರ ರದ್ದು ಮಾಡಿದ್ದು, ಈ ಸಂಬಂಧ ಖದ್ದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ.
ಒವೈಸಿ ವಿರುದ್ಧ ಜಾರಿಯಾಗಿದ್ದ ಬಂಧನ ರಹಿತ ವಾರೆಂಟ್ ರದ್ದು ಕೋರಿ ಒವೈಸಿ ಪರ ವಕೀಲ ಹಜೀಮ್ ಅವರು ಅರ್ಜಿ ಸಲ್ಲಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ವಾರೆಂಟ್‌ನ್ನು ರದ್ದು ಮಾಡಿ, ಮೇ 9ರೊಳಗೆ ನ್ಯಾಯಾಲಯಕ್ಕೆ ಒವೈಸಿಯನ್ನು ಹಾಜಪಡಿಸುವಂತೆ ವಕೀಲರಿಗೆ ಸೂಚಿಸಿದೆ.
ನ್ಯಾಯಾಲಯದ ವಿಚಾರಣೆ ಮುಗಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ವಕೀಲ ಹಜೀಮ್, ನ್ಯಾಯಾಲಯ ಒವೈಸಿ ವಿರುದ್ಧ ಜಾರಿ ಮಾಡಿದ್ದ ವಾರೆಂಟ್ ಅನ್ನು ರದ್ದು ಮಾಡಿದ್ದು, ಮೇ 9ರೊಳಗೆ ನ್ಯಾಯಾಲಯಕ್ಕೆ ಒವೈಸಿ ಹಾಜರಾಗಬೇಕೆಂದು ಸೂಚಿಸಿದೆ ಎಂದರು.