ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಸ್ತೆ ಅಪಘಾತ: ಲಾಲೂಗೆ ತೀವ್ರ ಗಾಯ

ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಕಾರು ವಿಲಕ್ಷಣ ರೀತಿಯಲ್ಲಿ ಅಪಘಾತಕ್ಕಿಡಾಗಿದ್ದು, ಲಾಲೂ ಅವರ...

Vishwanath S
Updated On : 4 May 2013, 3:07 am

ಪಾಟ್ನಾ: ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಕಾರು ವಿಲಕ್ಷಣ ರೀತಿಯಲ್ಲಿ ಅಪಘಾತಕ್ಕಿಡಾಗಿದ್ದು, ಲಾಲೂ ಅವರ ತಲೆ ಹಾಗೂ ಮುಖಕ್ಕೆ ತೀವ್ರ ಗಾಯಗಳಾಗಿವೆ.

ಕಾರ್ಯನಿಮಿತ್ತ ವೈಶಾಲಿ ಜಿಲ್ಲೆಗೆ ಲಾಲೂ ಅವರು ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನ ಚಾಲಕ ತುರ್ತಾಗಿ ಬ್ರೇಕ್ ಹಾಕಿದ್ದಾನೆ. ಆ ಸಂದರ್ಭದಲ್ಲಿ ಕಾರಿನ ಗ್ಲಾಸ್ ಓಡೆದಿದ್ದರಿಂದ ಕಾರಿನ ಮುಂದಿನ ಸೀಟಿನಲ್ಲಿ ಕೂತಿದ್ದ ಲಾಲೂ ಪ್ರಸಾದ್ ಅವರ ಮುಖಕ್ಕೆ ಗ್ಲಾಸ್ ತಾಗಿ ತಲೆ ಹಾಗೂ ಮುಖಕ್ಕೆ ಗಾಯಗಳಾಗಿದೆ. ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಅವರ ಆಪ್ತ ಸಹಾಯಕ ಹೇಳಿದ್ದಾರೆ.

ಲಾಲೂ ಅವರ ತಲೆಗೆ ಪೆಟ್ಟಾಗಿದ್ದರಿಂದ ಎರಡು ಹೊಲಿಗೆ ಹಾಕಲಾಗಿದೆ. ಪ್ರಥಮ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಿರುವ ವೈದ್ಯರು, ಲಾಲೂ ಅವರ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.

ರಾಘೊಪುರ್‌ನ ಖಚ್ಚಿ ದರ್ಗಾ ಬಳಿಯ ಮೇಲ್ಸೆತುವೆ ಮೇಲೆ ರಾತ್ರಿ 10ರ ಸಮಯದಲ್ಲಿ ಲಾಲೂ ಅವರು ಕಾರು ಚಲಿಸುತ್ತಿದ್ದ ವೇಳೆ ಚಾಲಕ ತುರ್ತಾಗಿ ಬ್ರೇಕ್ ಹಾಕಿದ್ದಾನೆ. ಇದರಿಂದಾಗಿ ಕಾರಿನ ಕಿಟಕಿ ಗಾಜು ಹೊಡೆದಿದ್ದು, ಗ್ಲಾಸ್ ತಾಗಿ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement