ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಿಂಧು ಮುಡಿಗೆ ಮಲೇಷ್ಯಾ ಗ್ರ್ಯಾಂಡ್ ಫ್ರೀ

ಮಲೇಷ್ಯಾ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಆಟಗಾರ್ತಿ ಪಿ.ವಿ. ಸಿಂಧು ಅವರು ಮಹಿಳೆಯರ...

Vishwanath S
Updated On : 4 May 2013, 5:53 am

ಕೌಲಲಾಂಪುರ್: ಮಲೇಷ್ಯಾ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಆಟಗಾರ್ತಿ ಪಿ.ವಿ. ಸಿಂಧು ಅವರು ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪ್ರಥಮ ಬಾರಿಗೆ ಚಿನ್ನದ ಪದಕ ಗೆದ್ದಿದ್ದಾರೆ.

ಜೌರಾ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಸಿಂಗಾಪುರದ ಜುವಾಂಗು ವಿರುದ್ಧ 21-17, 21-19 ಅಂತರದಲ್ಲಿ ಸೋಲಿಸಿ, ವಿಜಯದ ನಗೆ ಬೀರಿದ್ದಾರೆ. 1 ಗಂಟೆ 11 ನಿಮಿಷಗಳ ಕಾಲ ನಡೆದ ಪಂದ್ಯ ರೋಚಕತೆಯಿಂದ ಕೂಡಿತು.

ಉತ್ತಮ ಆರಂಭ ಪಡೆದ ಸಿಂಧು ಮೊದಲ ಸೆಟ್‌ನಲ್ಲಿ 21-17 ಅಂತರದಲ್ಲಿ ಜುವಾಂಗು ಅವರನ್ನು ಸೋಲಿಸಿದಾಗ. ಸಿಂಧು ಫೈನಲ್‌ನಲ್ಲಿ ಗೆಲ್ಲುವ ಭರವಸೆ ಮೂಡಿಸಿದರು. ಆದರೆ ಎರಡನೇ ಸುತ್ತಿನ ಪಂದ್ಯದಲ್ಲಿ ಎದುರಾಳಿ ಜುವಾಂಗು ಅವರು ಆಕ್ರಮಣಕಾರಿ ಆಟ ಪ್ರದರ್ಶಿಸಿ ಸಿಂಧು ಅವರ ಚಿನ್ನದ ಪದಕ ಗೆಲ್ಲುವ ಆಸೆಗೆ ಎಲ್ಲೋ ಕೊಂಚ ಪೆಟ್ಟು ಕೊಟ್ಟರು. ಆದರೆ ಮೂರನೇ ಸುತ್ತಿನ ಕೊನೆಯ ಸೆಟ್‌ನಲ್ಲಿ ಸಂಘಟಿತ ಆಟ ಪ್ರದರ್ಶಿಸಿದ ಸಿಂಧು 21-19ರ ಅಂತರದಲ್ಲಿ ಗೆದ್ದು ಗೆಲುವಿನ ನಗೆ ಬೀರುದರು.

ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅವರು ಥಾಯ್ಲೆಂಡ್‌ನ ಸ್ಯಾಪ್ಸಿರಿ ಟೆರಾಟ್ಟನಾಚ್ಚೈ ಅವರನ್ನು 21-17, 21-11 ಅಂತರದಲ್ಲಿ ಸೋಲಿಸಿ, ಫೈನಲ್‌ಗೆ ಕಾಲಿಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement