ರೇಲ್ವೆ ಬಡ್ತಿಗಾಗಿ ಲಂಚ: ಮತ್ತೊಬ್ಬನ ಬಂಧನ
ರೇಲ್ವೆ ಬಡ್ತಿಗಾಗಿ 90 ಲಕ್ಷ ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ರೇಲ್ವೆ ಸಚಿವ ಪಿ.ಕೆ. ಬನ್ಸಲ್‌ರ...
ಚಂಡೀಗಢ: ರೇಲ್ವೆ ಬಡ್ತಿಗಾಗಿ 90 ಲಕ್ಷ ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ರೇಲ್ವೆ ಸಚಿವ ಪಿ.ಕೆ. ಬನ್ಸಲ್‌ರ ಸೋದರಳಿಯನ ಆಪ್ತ ಅಜಯ್ ಗಾರ್ಗ್‌ನನ್ನು ಸಿಬಿಐ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಪ್ರಕರಣದ ತನಿಖೆಕೆಯನ್ನು ಚುರುಕುಗೊಳಿಸಿರುವ ಸಿಬಿಐ, ಈ ಸಂಬಂಧ ಅಜಯ್ ಗಾರ್ಗ್ ಅವರ ಮೊಬೈಲ್ ಕರೆಗಳ ಮೇಲೆ ನಿಗಾ ವಹಿಸಿತ್ತು. ಪ್ರಕರಣದಲ್ಲಿ ಅಜಯ್ ಸಹ ಭಾಗಿಯಾಗಿರುವುದನ್ನು ಖಚಿತಪಡಿಸಿಕೊಂಡ ಸಿಬಿಐ ಅಧಿಕಾರಿಗಳು ಇಂದು ಚಂಡೀಗಢದ ಅಜಯ್ ಅವರ ನಿವಾಸ ಮೇಲೆ ದಾಳಿ ಮಾಡಿ, ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಒಟ್ಟಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಈವರೆಗೆ 8 ಮಂದಿಯನ್ನು ಬಂಧಿಸಿದ್ದಾರೆ.
ಈ ಮಧ್ಯೆ, ರೇಲ್ವೆ ಬಡ್ತಿಗಾಗಿ ಸಂಬಂಧಿಗಳು ಲಂಚ ಪಡೆದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರತಿಪಕ್ಷಗಳು, ಬನ್ಸಲ್‌ರ ರಾಜಿನಾಮೆಗೆ ಪಟ್ಟು ಹಿಡಿದು, ಸದನದ ಒಳಗೂ, ಹೊರಗೂ ತೀವ್ರ ಪ್ರತಿಭಟನೆ ನಡೆಸುತ್ತಿವೆ.