ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮತ ಎಣಿಕೆ ಆರಂಭ, 'ಕೈ' ಮುಂದೆ, ಕಮಲ ಹಿಂದೆ

ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ ಸರಿಯಾಗಿ 8 ಗಂಟೆಗೆ ಆರಂಭಗೊಂಡಿದ್ದು, ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

Lingaraj Badiger
Updated On : 8 May 2013, 10:09 am

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ ಸರಿಯಾಗಿ 8 ಗಂಟೆಗೆ ಆರಂಭಗೊಂಡಿದ್ದು,  ನಿರೀಕ್ಷೆಯಂತೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ. ಇನ್ನು ಎರಡನೇ ಸ್ಥಾನದಲ್ಲಿ ಬಿಜೆಪಿ ಹಾಗೂ ಮೂರನೇ ಸ್ಥಾನದಲ್ಲಿ ಜೆಡಿಎಸ್ ಮುನ್ನಡೆಯುತ್ತಿವೆ.

ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಟ ಅಂಬರೀಷ್ ಅವರು 1 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದರೆ, ಚೆನ್ನಪಟ್ಟಣದಲ್ಲಿ ಮಾಜಿ ಸಚಿವ ಎಸ್ಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಮೈಸೂರಿನಲ್ಲಿ ಸಚಿವ ರಾಮದಾಸ್ ಅವರು ಹಿನ್ನೆಡೆ ಅನುಭವಿಸುತ್ತಿದ್ದಾರೆ.

ವಿರಾಜಪೇಟೆಯಲ್ಲಿ ಸ್ಪೀಕರ್ ಕೆ.ಜೆ.ಬೋಪಯ್ಯ ಅವರು 965 ಮತಗಳ ಮುನ್ನಡೆ ಸಾಧಿಸಿದ್ದಾರೆ.

  1. ಹರಬಾವಿ- ಬಿಜೆಪಿ ಬಾಲಚಂದ್ರ ಜಾರಕಿಹೊಳಿ ಮುನ್ನಡೆ
  2. ಕೊರಟಗೆರೆ- ಕಾಂಗ್ರೆಸ್‌ನ ಪರಮೇಶ್ವರ ಹಿನ್ನಡೆ
  3. ಬೀದರ್ - ಅಶೋಕ್ ಖೇಣಿ ಮುನ್ನಡೆ
  4. ಶಿರಸಿ-ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಹಿನ್ನಡೆ
  5. ರಾಯಚೂರು ನಗರ- ಬಿಎಸ್‌ಆರ್ ಅಭ್ಯರ್ಥಿ ನಟಿ ಪೂಜಾ ಗಾಂಧಿಗೆ ಹಿನ್ನಡೆ
  6. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್-ಜೆಡಿಎಸ್ ಅಭ್ಯರ್ಥಿ ಗೋಪಾಲಯ್ಯ ಮುನ್ನಡೆ
  7. ಹಾಸನ -ಜೆಡಿಎಸ್‌ನ ಪ್ರಕಾಶ್ ಮುನ್ನಡೆ
  8. ಕಾರ್ಕಳ - ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಮುನ್ನಡೆ
  9. ಹಳಿಯಾಳ್ - ಕಾಂಗ್ರೆಸ್‌ನ ಆರ್.ವಿ.ದೇಶಪಾಂಡೆ ಮುನ್ನಡೆ
  10. ಬಂಗಾರ ಪೇಟೆ - ಕಾಂಗ್ರೆಸ್‌ನ ನಾರಾಯಣಸ್ವಾಮಿ ಮುನ್ನಡೆ
  11. ಹುಕ್ಕೇರಿ - ಉಮೇಶ್ ಕತ್ತಿ ಮುನ್ನಡೆ
  12. ತಿಪಟೂರು- ಬಿಜೆಪಿ ಬಿ.ಸಿ.ನಾಗೇಶ್ ಮುನ್ನಡೆ
  13. ಬೆಂಗಳೂರಿನ ಗೋವಿಂದರಾಜ ನಗರ- ಪ್ರಿಯಾಕೃಷ್ಣ ಮುನ್ನಡೆ
  14. ಜೇವರ್ಗಿ - ಡಾ. ಅಜಯ್ ಸಿಂಗ್ ಮುನ್ನಡೆ
  15. ಹೊಸಕೋಟೆ - ಬಿಜೆಪಿಯ ಬಚ್ಚೆಗೌಡ ಮುನ್ನಡೆ
  16. ಚಿತ್ರದುರ್ಗ-ಬಿಜೆಪಿ ತಿಪ್ಪಾರೆಡ್ಡಿ ಮುನ್ನಡೆ
  17. ಕುಂದಗೊಳ- ಕಾಂಗ್ರೆಸ್‌ನ ಸಿ.ಎಸ್. ಶಿವಳ್ಳಿ ಮುನ್ನಡೆ
  18. ಧಾರವಾಡ- ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ಮುನ್ನಡೆ
  19. ಶಿರಾ- ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಮುನ್ನಡೆ
  20. ಕನಕಪುರ- ಡಿ.ಕೆ.ಶಿವಕುಮಾರ್ ಮುನ್ನಡೆ
  21. ಪದ್ಮನಾಭನಗರ- ಆರ್.ಅಶೋಕ್ ಮುನ್ನಡೆ
  22. ಹುಬ್ಬಳ್ಳಿ-ಧಾರಾವಡ ಕೇಂದ್ರ- ಸಿಎಂ ಶೆಟ್ಟರ್ ಮುನ್ನಡೆ
  23. ಕಡೂರು - ವೈಎಸ್‌ವಿ ದತ್ತಾ ಮುನ್ನಡೆ
  24. ಮುದ್ದೇಬಿಹಾಳ- ಅಪ್ಪಾಜಿನಾಡಗೌಡ ಮುನ್ನಡೆ
  25. ಅಥಣಿ-ಬಿಜೆಪಿಯ ಲಕ್ಷ್ಮಣ ಸವದಿ ಮುನ್ನಡೆ
  26. ದಾವಣಗೆರೆ ಉತ್ತರ- ಕಾಂಗ್ರೆಸ್ ಮಲ್ಲಿಕಾರ್ಜುನ ಮುನ್ನಡೆ
  27. ಬಳ್ಳಾರಿ ಗ್ರಾಮೀಣ- ಬಿಎಸ್‌ಆರ್ ಕಾಂಗ್ರೆಸ್, ಬಿ.ಶ್ರೀರಾಮುಲು ಮುನ್ನಡೆ
  28. ವಿಜಯನಗರ- ಕಾಂಗ್ರೆಸ್ ಎಂ.ಕೃಷ್ಣಪ್ಪಗೆ ಮುನ್ನಡೆ
  29. ಬೀದರ್ - ಗುರುಪಾದಪ್ಪ ನಾಗಮಾರಪಲ್ಲಿ ಮುನ್ನಡೆ
  30. ರಾಮನಗರ - ಕುಮಾರಸ್ವಾಮಿಗೆ ಮುನ್ನಡೆ
  31. ಹೊಸದುರ್ಗ - ಗೂಳಿಹಟ್ಟಿ ಶೇಖರ್ ಮುನ್ನಡೆ
  32. ಗುಲ್ಬರ್ಗಾ ಉತ್ತರ- ಕಾಂಗ್ರೆಸ್‌ನ ಖಮರುಲ್ ಇಸ್ಲಾಂ ಮುನ್ನಡೆ
  33. ಯಮಕನಮರಡಿ-ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಭಾರಿ ಮುನ್ನಡೆ
  34. ರಾಯಭಾಗ- ಬಿಜೆಪಿಯ ದುರ್ಯೋಧನ ಐಹೊಳೆ ಮುನ್ನಡೆ
  35. ಬಳ್ಳಾರಿ ನಗರ- ಕಾಂಗ್ರೆಸ್‌ನ ಅನಿಲ್ ಲಾಡ್ ಮುನ್ನಡೆ
  36. ವರುಣಾ- ಕಾಂಗ್ರೆಸ್‌ನ ಸಿದ್ದರಾಮಯ್ಯಗೆ ಭಾರಿ ಮುನ್ನಡೆ
  37. ಬಳ್ಳಾರಿ ವಿಜಯನಗರ- ಬಿಜೆಪಿಯ ಅನಂದ್ ಸಿಂಗ್‌ಗೆ ಮುನ್ನಡೆ
  38. ಸಿರಗುಪ್ಪ- ಕಾಂಗ್ರೆಸ್‌ನ ಬಿ.ಎಂ ನಾಗರಾಜ್‌ಗೆ ಮುನ್ನಡೆ
  39. ಕಂದಾಪುರ- ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮುನ್ನಡೆ
  40. ತೇರದಾಳ - ಉಮಾಶ್ರೀಗೆ 1600 ಮತಗಳ ಮುನ್ನಡೆ
  41. ಮೊಳಕಾಲ್ಮೂರು- ಕಾಂಗ್ರೆಸ್‌ನ ಎನ್.ವೈ.ಗೋಪಾಲಕೃಷ್ಣ ಮುನ್ನಡೆ
  42. ರಾಜಾಜಿನಗರ - ಬಿಜೆಪಿಯ ಸುರೇಶ್ ಕುಮಾರ್ ಮುನ್ನಡೆ
  43. ಉಡುಪಿ- ಕಾಂಗ್ರೆಸ್ ಪ್ರಮೋದ್ ಮಧ್ವರಾಜ್
  44. ಕುಂದಾಪುರ- ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement