ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪುತ್ರನ ಅಪಹರಣ: ಐಎಸ್‌ಐ ಮೊರೆ ಹೋದ ಮಾಜಿ ಪ್ರಧಾನಿ

ಪಾಕಿಸ್ತಾನ ಮಾಜಿ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ತಮ್ಮ ಮಗ ಅಲಿ ಹೈದರ್‌ನನ್ನು ಹುಡುಕಿ ಕೊಡುವಂತೆ ಗುಪ್ತಚರ ಇಲಾಖೆ ಐಎಸ್‌ಐನ ಮೊರೆ ಹೋಗಿದ್ದಾರೆ...

Vishwanath S
Updated On : 11 May 2013, 2:38 am

ಲಾಹೋರ್: ಪಾಕಿಸ್ತಾನ ಮಾಜಿ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ತಮ್ಮ ಮಗ ಅಲಿ ಹೈದರ್‌ನನ್ನು ಹುಡುಕಿ ಕೊಡುವಂತೆ ಗುಪ್ತಚರ ಇಲಾಖೆ ಐಎಸ್‌ಐನ ಮೊರೆ ಹೋಗಿದ್ದಾರೆ.

ಗಿಲಾನಿ ಅವರ ಪುತ್ರ ಅಲಿ ಹೈದರ್‌ನನ್ನು ಅಪರಿಚಿತ ಬಂದೂಕುಧಾರಿಗಳು ಗುರುವಾರ ಅಪಹರಿಸಿದ್ದು, ಅಪಹರಣವಾಗಿ ಎರಡು ದಿನ ಕಳೆದರು ಪಾಕಿಸ್ತಾನ ಪೊಲೀಸರು ಯಾವುದೇ ಮಾಹಿತಿ ಸಂಗ್ರಹಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ತಮ್ಮ ಪುತ್ರ ಹೈದರ್‌ನನ್ನು ಅಪಹರಣಕಾರರಿಂದ ರಕ್ಷಿಸುವಂತೆ ಐಎಸ್‌ಐ ಸಂಸ್ಥೆಯ ಮೊರೆ ಹೋಗಿರುವುದಾಗಿರುವುದಾಗಿ ಗಿಲಾನಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪುತ್ರ ಹೈದರ್‌ನ ಅಪಹರಣವಾಗಿ ಎರಡು ದಿನ ಕಳೆದಿದೆ. ಆದರೆ ಅಪಹರಣಕಾರರು ತಮ್ಮ ಬೇಡಿಕೆ ಸಂಬಂಧ ಇಲ್ಲಿಯವರೆಗೂ ಯಾವುದೇ ದೂರವಾಣಿ ಕರೆ ಮಾಡಿಲ್ಲ ಎಂದು ಹೇಳಿದರು. ತಮ್ಮ ಮಗನ ಜೀವಕ್ಕೆ ಏನಾದರು ತೊಂದರೆಯಾಗಬಹುದೆಂಬ ಆತಂಕಕ್ಕೀಡಾಗಿರುವ ಗಿಲಾನಿ ಅವರು ಬೇಗ ಪತ್ತೆ ಹಚ್ಚುವಂತೆ ಐಎಸ್‌ಐ ಮೊರೆ ಹೋಗಿದ್ದಾರೆ.

27 ವರ್ಷದ ಅಲಿ ಹೈದರ್ ಮುಲ್ತಾನ್‌ನ ಮಟಿ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಬಂದೂಕುಧಾರಿಗಳು, ಅಲಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಈ ಘಟನೆಯಲ್ಲಿ ಗಿಲಾನಿ ಆಪ್ತ ಕಾರ್ಯದರ್ಶಿ ಮೊಹಿನುದ್ದೀನ್ ಸ್ಥಳದಲ್ಲೇ ಮೃತಪಟ್ಟಿದ್ದು, 4 ಅಂಗರಕ್ಷಕರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಬಂದೂಕುಧಾರಿಗಳು ತಮ್ಮ ಜತೆ ತಂದಿದ್ದ ಕಾರಿನಲ್ಲಿ ಹೈದರ್‌ನನ್ನು ಅಪಹರಿಸಿದ್ದರು.

ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಪ್ರಬಲ ನಾಯಕ ಗಿಲಾನಿಗೆ ಉಗ್ರ ಸಂಘಟನೆ ತೆಹ್ರಿಕ್-ಎ-ತಾಲಿಬಾನ್‌ನಿಂದ ಬೆದರಿಕೆ ಇತ್ತು. ಈ ಹಿನ್ನೆಲೆಯಲ್ಲಿ ಮೇ 11ರಂದು ನಡೆಯಲಿರುವ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ಗಿಲಾನಿ ನಿರಾಕರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement