ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೃತ ಮಂಜುನಾಥ್ ಐಎಎಸ್ ಪೂರ್ವಭಾವಿ ಪರೀಕ್ಷೆಯೇ ಪಾಸಾಗಿಲ್ಲ: ಯುಪಿಎಸ್‌ಸಿ

ಐಎಎಸ್ ಪರೀಕ್ಷೆಯ ಫಲಿತಾಂಶದ ಪಟ್ಟಿಯಲ್ಲಿ ತನ್ನ ಹೆಸರಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ರಾಜ್ಯದ ವಿ.ವೈ ಮಂಜುನಾಥ್..

Lingaraj Badiger
Updated On : 13 May 2013, 5:19 am

ನವದೆಹಲಿ: ಐಎಎಸ್ ಪರೀಕ್ಷೆಯ ಫಲಿತಾಂಶದ ಪಟ್ಟಿಯಲ್ಲಿ ತನ್ನ ಹೆಸರಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ರಾಜ್ಯದ ವಿ.ವೈ ಮಂಜುನಾಥ್ ಅವರು ಪೂರ್ವಭಾವಿ ಪರೀಕ್ಷೆಯೇ ಪಾಸಾಗಿಲ್ಲ ಎಂದು ಸೋಮವಾರ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ಸ್ಪಷ್ಟಪಡಿಸಿದೆ.

ಯುಪಿಎಸ್‌ಸಿ ಪ್ರಕಟಿಸಿದ್ದ ಫಲಿತಾಂಶದ ಪಟ್ಟಿಯಲ್ಲಿ ತನ್ನ ಹೆಸರಿಲ್ಲ ಎಂಬ ಕಾರಣಕ್ಕೆ ಮಡಿಕೇರಿಯ ನಾಪೋಕ್ಲು ಬಳಿ ಶನಿವಾರ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದ. ಅಂತ್ಯಕ್ರಿಯೆ ನಂತರ ಮಾತನಾಡಿದ್ದ ಆತನ ತಾಯಿ ನಾಗರತ್ಮಮ್ಮ, ಮಗನ ಸಾವಿಗೆ ಕೇಂದ್ರ ಲೋಕಸೇವಾ ಆಯೋಗವೇ ಕಾರಣ ಎಂದು ಬೊಟ್ಟು ಮಾಡಿ ತೋರಿಸಿದ್ದರು. ನಮ್ಮ ಪುತ್ರ ರ್ಯಾಂಕ್ ವಿದ್ಯಾರ್ಥಿ. ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುತ್ತಾನೆ ಎಂಬ ನಿರೀಕ್ಷೆ ಇತ್ತು. ಆದರೆ ಆತನ ಹೆಸರಿನ ಜಾಗದಲ್ಲಿ ಬೇರೆ ಹೆಸರಿದೆ. ಆಯೋಗದ ಯಡವಟ್ಟಿನಿಂದ ಇಂದು ಇಂತಹ ಹಲವು ವಿದ್ಯಾರ್ಥಿಗಳು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.

ಮಂಜುನಾಥ್ ತಾಯಿ ಆರೋಪಕ್ಕೆ ಯುಪಿಎಸ್‌ಸಿ ಇಂದು ಸ್ಪಷ್ಟಿಕರಣ ನೀಡಿದ್ದು, ಮಂಜುನಾಥ್ ಐಎಎಸ್ ಪೂರ್ವಭಾವಿ ಪರೀಕ್ಷೆಯೇ ಪಾಸಾಗಿಲ್ಲ ಎಂದು ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement