ಒಲಿಂಪಿಕ್ಸ್: ಭಾರತಕ್ಕೆ ಗ್ರೀನ್ ಸಿಗ್ನಲ್
ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಭಾರತಕ್ಕೆ ಹೇರಿದ್ದ ನಿರ್ಬಂಧವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ತೆರವುಗೊಳಿಸಿದೆ...
ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಭಾರತಕ್ಕೆ ಹೇರಿದ್ದ ನಿರ್ಬಂಧವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ತೆರವುಗೊಳಿಸಿದೆ.
ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ), ಐಒಸಿ ತೀರ್ಮಾನಗಳಿಗೆ ಒಪ್ಪಿಗೆ ಸೂಚಿಸಿ ಹೊಸ ಚುನಾವಣೆ ನಡೆಸಲು ಸಮ್ಮತಿಸಿದ ಹಿನ್ನೆಲೆಯಲ್ಲಿ ಭಾರತಕ್ಕೆ ಹೇರಿದ್ದ ನಿರ್ಬಂಧವನ್ನು ಐಒಸಿ ತೆರವುಗೊಳಿಸಿದೆ.
ಐಒಸಿ ಪ್ರಣಾಳಿಕೆಗಳಿಗೆ ವಿರುದ್ಧವಾಗಿ ಭಾರತ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಐಒಸಿ ಭಾರತಕ್ಕೆ ನಿರ್ಬಂಧ ಹೇರಿತ್ತು.
ಇದೀಗ 5 ತಿಂಗಳ ನಂತರ ಲೌಸನ್ನೆಯಲ್ಲಿ ಐಒಸಿ ಮತ್ತು ಐಒಎ ಸಭೆ ಸೇರಿದ್ದು, ಭಾರತವನ್ನು ಒಲಿಂಪಿಕ್ ಸಮಿತಿಗೆ ಮರು ನೇಮಕಗೊಳಿಸಲಾಗಿದೆ.
ಅದೇ ವೇಳೆ ಡಿಸೆಂಬರ್‌ನಲ್ಲಿ ಐಒಎ ನಡೆಸಿದ ಚುನಾವಣೆಯನ್ನು ಐಒಸಿ ಅಸಿಂಧು ಎಂದು ಘೋಷಿಸಿದ್ದು, ಇನ್ನು ಮುಂದೆ ಐಒಸಿ ಮಾನದಂಡ ಪ್ರಕಾರವೇ ಮುಂದಿನ ಚುನಾವಣೆ ನಡೆಯಲಿದೆ ಎಂದು ಐಒಸಿ ಹೇಳಿದೆ.