ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಳಂಕರಹಿತರಿಗೆ ಸಂಪುಟದಲ್ಲಿ ಸ್ಥಾನ: ಸಿಎಂ ಸಿದ್ದು

ನಾಳೆ ಸಂಜೆಯೊಳಗೆ ನೂತನ ಸಂಪುಟ ಸೇರುವ ಸಚಿವರ ಪಟ್ಟಿ ಸಿದ್ಧವಾಗಲಿದ್ದು, ಇನ್ನು 2-3 ದಿನದಲ್ಲಿ ಸಚಿವ ಸಂಪುಟ ..

Lingaraj Badiger
Updated On : 15 May 2013, 2:09 am

ನವದೆಹಲಿ: ನಾಳೆ ಸಂಜೆಯೊಳಗೆ ನೂತನ ಸಂಪುಟ ಸೇರುವ ಸಚಿವರ ಪಟ್ಟಿ ಸಿದ್ಧವಾಗಲಿದ್ದು, ಇನ್ನು 2-3 ದಿನದಲ್ಲಿ ಸಚಿವ ಸಂಪುಟ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.

ಸಿದ್ದು ಸಂಪುಟ ರಚನೆ ಸಂಬಂಧ ಪಕ್ಷದ ಹೈಕಮಾಂಡ್‌ನೊಂದಿಗೆ ಚರ್ಚಿಸಲು ಇಂದು ದೆಹಲಿಗೆ ಆಗಮಿಸಿದ್ದು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ನೂತನ ಸಚಿವರ ಪಟ್ಟಿ ಸಿದ್ಧವಾಗಲಿದ್ದು, ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಮತ್ತು ಯಾರನ್ನು ಸೇರಿಸಿಕೊಳ್ಳಬಾರದು ಎಂಬುದರ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು. ಇದೇ ವೇಳೆ ಕಳಂಕ ರಹಿತರಿಗೆ ಸಂಪುಟದಲ್ಲಿ ಸ್ಥಾನ ನೀಡುವುದಾಗಿ ಸಿಎಂ ಭರವಸೆ ನೀಡಿದರು.

ಇನ್ನು ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕರಲ್ಲಿ ತೀವ್ರ ಪೊಪೋಟಿ ಏರ್ಪಟ್ಟಿದ್ದು, 100ಕ್ಕು ಹೆಚ್ಚು ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟು ತಮ್ಮ ಪರವಾಗಿ ಲಾಬಿ ನಡೆಸುತ್ತಿದ್ದಾರೆ.
ಈ ನಡುವೆ ಕಳಂಕಿತರಿಗೆ ಸಚಿವ ಸ್ಥಾನ ನೀಡದಂತೆ ಹೈಕಮಾಂಡ್ ಸೂಚಿಸಿದ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕರು ತಮ್ಮ ಪ್ರತಿಸ್ಪರ್ಧಿ ಶಾಸಕರ ಅಕ್ರಮಗಳ ಬಗ್ಗೆ ಪಕ್ಷದ ವರಿಷ್ಠರಿಗೆ ಮಾಹಿತಿ ನೀಡುತ್ತಿದ್ದಾರೆ.

ಇನ್ನು ಜಿಲ್ಲಾವಾರು ಹಾಗೂ ಹಿರಿತನದ ಪ್ರಾತಿನಿದ್ಯದ ಮೇಲೆ ಸಚಿವ ಸ್ಥಾನ ನೀಡಲು ಸಿಎಂ ಸಿದ್ದು ಮುಂದಾಗಿದ್ದು, ಜಿಲ್ಲಾವಾರು ಸಂಭವನಿಯ ಸಚಿವರ ಪಟ್ಟಿ ಈ ಕೆಳಗಿನಂತಿದೆ.
ಬೆಂಗಳೂರು ಗ್ರಾಮಾಂತರ- ಡಿ.ಕೆ.ಶಿವಕುಮಾರ್
ಬೆಂಗಳೂರು ನಗರ- ರೋಷನ್ ಬೇಗ್, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್
ಶಿವಮೊಗ್ಗ - ಕಾಗೋಡು ತಿಮ್ಮಪ್ಪ
ದಾವಣಗೆರೆ - ಎಸ್.ಎಸ್. ಮಲ್ಲಿಕಾರ್ಜುನ್, ಶಿವಮೂರ್ತಿ ನಾಯಕ್
ಗದಗ- ಎಚ್.ಕೆ.ಪಾಟೀಲ್
ಉಡುಪಿ-ಪ್ರಮೋದ್ ಮಧ್ವರಾಜ್
ಧಾರವಾಡ-ವೀರಣ್ಣ ಮತ್ತಿಕಟ್ಟಿ
ಬೆಳಗಾವಿ- ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಹಾಗೂ ಪ್ರಕಾಶ್ ಹುಕ್ಕೇರಿ
ಹಾಸನ- ವಾಲೇ ಮಂಜು
ಮಂಡ್ಯ - ಅಂಬರೀಷ್
ಮೈಸೂರು - ತನ್ವೀರ್ ಸೇಠ್, ಶ್ರೀನಿವಾಸ್ ಪ್ರಸಾದ್
ತುಮಕೂರು- ಟಿ.ಬಿ.ಜಯಚಂದ್ರ
ಯಾದಗಿರಿ- ಎ.ಬಿ. ಮಾಲಕರೆಡ್ಡಿ, ರಾಜಾ ವೆಂಕಟಪ್ಪ ನಾಯಕ
ಚಿತ್ರದುರ್ಗ- ಆಂಜನೆಯ
ಇನ್ನು ಮಹಿಳಾ ಕೋಟಾದಲ್ಲಿ ಉಮಾಶ್ರೀ ಹಾಗೂ ಮೊಟಮ್ಮ ಅವರ ಹೆಸರು ಕೇಳಿ ಬರುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement