ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದತ್‌ಗೆ ಜೀವ ಬೆದರಿಕೆಯೊಡ್ಡಿದ ಅನಾಮಧೇಯ ಪತ್ರ

ನಾಳೆ ಟಾಡಾ ಕೋರ್ಟ್‌ನಲ್ಲಿ ಶರಣಾದ ನಂತರ ನಟ ಸಂಜಯ್ ದತ್‌ರನ್ನು ಯಾವ ಜೈಲಿನಲ್ಲಿ...

Rashmi Kasaragodu
Updated On : 15 May 2013, 6:30 am

ಮುಂಬೈ: ನಾಳೆ ಟಾಡಾ ಕೋರ್ಟ್‌ನಲ್ಲಿ ಶರಣಾದ ನಂತರ ನಟ ಸಂಜಯ್ ದತ್‌ರನ್ನು ಯಾವ ಜೈಲಿನಲ್ಲಿಡಲಾಗುವುದು ಎಂಬ ನಿರ್ಧಾರ ಕೈಗೊಳ್ಳುವ ಮುನ್ನವೇ ದತ್‌ಗೆ ಜೈಲಿನಲ್ಲಿ ಜೀವ ಬೆದರಿಕೆ ಇದೆ ಎಂದು ಅರ್ಥರ್ ರೋಡ್ ಜೈಲಿಗೆ ಅನಾಮಧೇಯ ಪತ್ರವೊಂದು ಬಂದಿದೆ.

1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಜಯ್ ದತ್‌ಗೆ 42 ತಿಂಗಳುಗಳ ಜೈಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಪ್ರಕಟಿಸಿದ್ದು, ಅರ್ಥರ್ ರೋಡ್ ಜೈಲಿನಲ್ಲಿ ದತ್ ಸುರಕ್ಷೆಗಾಗಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ಆದಾಗ್ಯೂ, ದತ್ ಅವರನ್ನು ಯೆರ್ವಾಡಾ ಜೈಲಿನಲ್ಲಿರಿಸಲಾಗುವುದು ಎಂಬ ಸುದ್ದಿಯೂ ಕೇಳಿಬರುತ್ತಿದೆ.

ತನ್ನ ಜೀವಕ್ಕೆ ಬೆದರಿಕೆಯಿರುವುದರಿಂದ ತಾನು ಯೆರ್ವಾಡಾ ಜೈಲಿನಲ್ಲೇ ಶರಣಾಗತಿ ಹೊಂದುವುದಾಗಿ ದತ್ ನಿನ್ನೆ ಮನವಿಯೊಂದನ್ನು ಸಲ್ಲಿಸಿದ್ದರು.

ಆದರೆ ಇಂದು ದತ್ ತಾವು ಸಲ್ಲಿಸಿದ ಮನವಿಯನ್ನು ವಾಪಸ್ ತೆಗೆದುಕೊಂಡಿದ್ದು, ತಾನು ನಾಳೆ ಟಾಡಾ ಕೋರ್ಟ್‌ಗೆ ಶರಣಾಗುವುದಾಗಿ ಹೇಳುವ ಮೂಲಕ ದತ್ ಶರಣಾಗತಿ ಹೊಸ ತಿರುವನ್ನು ಪಡೆದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement