ದೆಹಲಿ ಗ್ಯಾಂಗ್‌ರೇಪ್ ಆರೋಪಿಗೆ ಜೈಲಲ್ಲಿ ವಿಷಪ್ರಾಶನ?
ಕಳೆದ ವರ್ಷ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಆರೋಪಿಯ ಮೇಲೆ ಸಹ ಕೈದಿಗಳು...
ನವದೆಹಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಆರೋಪಿಯ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಆರೋಪಿಯ ವಕೀಲರು ಬುಧವಾರ ಹೇಳಿದ್ದಾರೆ.
ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ವಿನಯ್ ಶರ್ಮಾ ಅವರ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆ. ಇದರಿಂದ ಶರ್ಮಾಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಮಂಗಳವಾರ ಅವರನ್ನು ನವದೆಹಲಿಯ ಲೋಕ್ ನಾಯಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶರ್ಮಾ ಅವರ ವಕೀಲ ಎ.ಪಿ ಸಿಂಗ್ ಹೇಳಿದ್ದಾರೆ.
ಅದೇ ವೇಳೆ ಶರ್ಮಾ ಅವರಿಗೆ ಜೈಲಿನಲ್ಲಿ ವಿಷಬೆರೆಸಿದ ಆಹಾರ ನೀಡಿದ್ದಾರೆ ಎಂದು ಎ.ಪಿ ಸಿಂಗ್ ಆರೋಪಿಸಿದ್ದಾರೆ.
ಶರ್ಮಾ ಅವರು ರಕ್ತ ವಾಂತಿ ಮಾಡುತ್ತಿದ್ದು, ಅವರಿಗೆ ತುಂಬಾ ಜ್ವರವಿದೆ. ಆತನಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು, ಆತನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
ಜೈಲಿನಲ್ಲಿರುವ ಸಹ ಕೈದಿಗಳು 20ರ ಹರೆಯದ ಶರ್ಮಾನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಮಾತ್ರವಲ್ಲದೆ ಕೆಲವು ವಾರಗಳಿಂದ ಅವರಿಗೆ ವಿಷಯುಕ್ತ ಪದಾರ್ಥಗಳನ್ನು ನೀಡುತ್ತಿರುವುದರಿಂದ ವಾಂತಿಯಾಗುತ್ತಿದೆ ಎಂದು ಶರ್ಮಾ ಅವರ ವಕೀಲರು ಆರೋಪಿಸಿದ್ದಾರೆ.