ಭಾರೀ ಏರಿಕೆ ಕಂಡ ಸೆನ್ಸೆಕ್ಸ್
ಮುಂಬೈ: ಇಂದಿನ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಭಾರೀ ಏರಿಕೆ ಕಂಡಿದೆ. ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 490.67 ಅಂಕ ಏರಿಕೆ ಕಂಡು 20212.96 ಅಂಕಗಳಲ್ಲಿ ಮುಕ್ತಾಯಗೊಂಡಿದೆ.
ಅದೇ ವೇಳೆ ನಿಫ್ಟಿ 151.35 ಅಂಕ ಏರಿಕೆ ಕಂಡು 6146.75 ಅಂಕಗಳಲ್ಲಿ ಮುಕ್ತಾಯಗೊಂಡಿದೆ.
28 ತಿಂಗಳ ನಂತರ ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ ಇಷ್ಟೊಂದು ಏರಿಕೆಯನ್ನು ಕಂಡಿದೆ.
ಮುಂದಿನ ಆರ್ಥಿಕ ನೀತಿಯಲ್ಲಿ ಹಣದುಬ್ಬರ ಕುಸಿತ ಕಂಡುಬರುವುದಾಗಿ ಆರ್ಬಿಐ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಂವೇದಿ ಸೂಚ್ಯಂಕದಲ್ಲಿ ಏರಿಕೆ ಕಂಡು ಬಂದಿದೆ.
ಬುಧವಾರದ ವಹಿವಾಟಿನಲ್ಲಿ ಎಲ್ ಆ್ಯಂಡ್ ಟಿ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಮಾರುತಿ ಸುಜುಕಿ, ಒಎನ್ಜಿಸಿ, ಬಜಾಜ್ ಆಟೋ, ಸಿಪ್ಲಾ, ಭಾರ್ತಿ ಏರ್ಟೆಲ್ ಮತ್ತು ಡಾ. ರೆಡ್ಡೀಸ್ ಲ್ಯಾಬ್ ಹೆಚ್ಚಿನ ಲಾಭ ಗಿಟ್ಟಿಸಿಕೊಂಡಿದೆ.