ಮಹಾರಾಷ್ಟ್ರದ 10ನೇ ತರಗತಿ ಪಠ್ಯದಲ್ಲಿ ಅರುಣಾಚಲ ಪ್ರದೇಶ ' ನಾಪತ್ತೆ'
ಮಹಾರಾಷ್ಟ್ರದ 10ನೇ ತರಗತಿಯ ಭೂಗೋಳ ಶಾಸ್ತ್ರ ಪಠ್ಯ ಪುಸ್ತಕದಲ್ಲಿರುವ ಭಾರತದ ಭೂಪಟದಲ್ಲಿ ಅರುಣಾಚಲ ಪ್ರದೇಶ ನಾಪತ್ತೆಯಾಗಿದೆ.
ಮುಂಬೈ: ಮಹಾರಾಷ್ಟ್ರದ 10ನೇ ತರಗತಿಯ ಭೂಗೋಳ ಶಾಸ್ತ್ರ ಪಠ್ಯ ಪುಸ್ತಕದಲ್ಲಿರುವ ಭಾರತದ ಭೂಪಟದಲ್ಲಿ ಅರುಣಾಚಲ ಪ್ರದೇಶ ನಾಪತ್ತೆಯಾಗಿದೆ. ಮಾತ್ರವಲ್ಲದೆ ಈ ಪ್ರದೇಶವು ಭಾರತದ ಭಾಗವಾಗಿರದೆ, ಚೀನಾದ ಭೂಭಾಗವೆಂದು ತೋರಿಸಲಾಗಿದೆ.
ಈ ಬಗ್ಗೆ ರಾಜ್ಯ ಸರ್ಕಾರ ಮಹಾರಾಷ್ಟ್ರ ಸ್ಟೇಟ್ ಬೋರ್ಡ್ ಆಫ್ ಸೆಕಂಡರಿ ಮತ್ತು ಹೈಯರ್ ಸೆಕೆಂಡರಿ ಎಜ್ಯುಕೇಷನ್‌ನ್ನು ಸಂಪರ್ಕಿಸಿದಾಗ ಅದು ಪ್ರಿಂಟಿಂಗ್ ಮಿಸ್ಟೇಕ್ ಎಂಬ ಉತ್ತರವನ್ನು ಬೋರ್ಡ್ ನೀಡಿದೆ.
ನಾನು ಈ ಬಗ್ಗೆ ಬೋರ್ಡ್ ಚೇರ್‌ಮೆನ್‌ರಲ್ಲಿ ಸ್ಪಷ್ಟನೆ ನೀಡುವಂತೆ ಕೇಳಿರುವುದಾಗಿ ಶಾಲಾ ವಿದ್ಯಾಭ್ಯಾಸದ ಸಚಿವ ರಾಜೇಂದ್ರ ದಾರ್ದಾ ಹೇಳಿದ್ದಾರೆ.
ಈಶಾನ್ಯ ರಾಜ್ಯಗಳನ್ನು ಚೀನಾದ ಭಾಗಗಳನ್ನಾಗಿ ತೋರಿಸಿರುವ ಬಗ್ಗೆ ಜನರು ಆಕ್ರೋಶ ವ್ಯಕ್ತ ಪಡಿಸಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಹೇಳಿದ್ದಾರೆ.
ಏತನ್ಮಧ್ಯೆ, ಪ್ರಸ್ತುತ ಪಠ್ಯಪುಸ್ತಕದಲ್ಲಿನ ತಪ್ಪು ಬಗ್ಗೆ ಪ್ರತಿಕ್ರಿಯೆ ನೀಡಲು ಬೋರ್ಡ್ ಚೇರ್‌ಮೆನ್ ಎಸ್. ಜಾದವ್ ಮಾಧ್ಯಮದವರ ಕೈಗೆ ಸಿಗಲಿಲ್ಲ.