ಈಶಾನ್ಯ ರಾಜ್ಯಗಳಿಗೆ 'ಮಹಸೆನ್' ಚಂಡಮಾರುತ ಭೀತಿ
ಅಸ್ಸಾಂ ಸೇರಿದಂತೆ ದೇಶದ ಈಶಾನ್ಯ ರಾಜ್ಯಗಳತ್ತ ಮಹಸೆನ್ ಚಂಡಮಾರುತ ಬೀಸಲಿದ್ದು, ಅಲ್ಲಿನ ಜನರು ಮುಂಜಾಗ್ರತೆ...
ಗುವಾಹಟಿ: ಅಸ್ಸಾಂ ಸೇರಿದಂತೆ ದೇಶದ ಈಶಾನ್ಯ ರಾಜ್ಯಗಳತ್ತ ಮಹಸೆನ್ ಚಂಡಮಾರುತ ಬೀಸಲಿದ್ದು, ಅಲ್ಲಿನ ಜನರು ಮುಂಜಾಗ್ರತೆ ವಹಿಸಬೇಕೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬ್ರಹ್ಮಪುತ್ರ ನದಿಯಲ್ಲಿ ಮುಂದಿನ ಮೂರು ದಿನಗಳ ಕಾಲ ದೋಣಿ ವಿಹಾರ , ಮೀನುಗಾರಿಕೆ ನಡೆಸಲು ನಿರ್ಬಂಧ ಹೇರಲಾಗಿದೆ.
ಜಿಲ್ಲಾ ಪ್ರಧಾನ ಕಾರ್ಯಾಲಯಗಳಲ್ಲಿ ಕಂಟ್ರೋಲ್ ರೂಂಗಳನ್ನು ಆರಂಭಿಸಲಾಗಿದ್ದು, ಇಲ್ಲಿಯವರಿಗೆ ಜನರನ್ನು ಸ್ಥಳಾಂತರಿಸುವ ಯಾವುದೇ ಕಾರ್ಯಗಳನ್ನು ಕೈಗೊಂಡಿಲ್ಲ.
ದಕ್ಷಿಣ ಅಸ್ಸಾಂ ಅಥವಾ ಬರಾಕ್ ವ್ಯಾಲಿಯಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದ್ದು, ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಗುವಾಹಟಿಯಲ್ಲಿರುವ ಪ್ರಾದೇಶಿಕ ಹವಾಮಾನ ಕೇಂದ್ರ ಹೇಳಿದೆ.
ಮೇ 10ರಂದು ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಹುಟ್ಟಿಕೊಂಡ ಈ ಚಂಡಮಾರುತ ಮೇ 14ರಂದು ಈಶಾನ್ಯ ರಾಜ್ಯಗಳತ್ತ ಸಾಗಿದೆ. ಗಂಟೆಗೆ 55 ರಿಂದ 65 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮಿಸೋರಾಂ, ಮಣಿಪುರ, ನಾಗಾಲ್ಯಾಂಡ್, ತ್ರಿಪುರ ಮತ್ತು ದಕ್ಷಿಣ ಅಸ್ಸಾಂನಲ್ಲಿ ಮುಂದಿನ 48ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಪವನ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಮಹೇಶ್ ಕುಮಾರ್ ಗುಪ್ತಾ ಹೇಳಿದ್ದಾರೆ.