ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಶ್ರೀಶಾಂತ್ ಬಂಧನಕ್ಕೆ ಧೋನಿ, ಭಜ್ಜಿ ಕಾರಣ: ಶ್ರೀಶಾಂತ್ ಕುಟುಂಬ

ಸ್ಪಾಟ್ ಫಿಕ್ಸಿಂಗ್‌ನ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಕ್ರಿಕೆಟಿಗ ಶ್ರೀಶಾಂತ್ ಅವರ ಅಪ್ಪ ತನ್ನ ಮಗನ ಬಂಧನಕ್ಕೆ ಟೀಂ...

Rashmi Kasaragodu
Updated On : 16 May 2013, 2:33 am

ನವದೆಹಲಿ: ಸ್ಪಾಟ್ ಫಿಕ್ಸಿಂಗ್‌ನ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಕ್ರಿಕೆಟಿಗ ಶ್ರೀಶಾಂತ್ ಅವರ ಅಪ್ಪ ತನ್ನ ಮಗನ ಬಂಧನಕ್ಕೆ ಟೀಂ ಇಂಡಿಯಾ ನಾಯಕ ಎಂ.ಎಸ್ ಧೋನಿ ಮತ್ತು ಹರ್ಭಜನ್ ಸಿಂಗ್ ಕಾರಣ ಎಂದು ದೂರಿದ್ದಾರೆ.

ಶ್ರೀಶಾಂತ್ ಬಂಧನದ ಬಗ್ಗೆ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಶ್ರೀಶಾಂತ್‌ರ ಅಪ್ಪ, ಈ ಎಲ್ಲ ವಿದ್ಯಮಾನಗಳಿಗೆ ಧೋನಿ ಮತ್ತು ಹರ್ಭಜನ್‌ರ ಪಿತೂರಿಯೇ ಕಾರಣ ಎಂದು ಹೇಳಿದ್ದಾರೆ.

ಅಂದೊಮ್ಮೆ ಧೋನಿ, ತಮ್ಮ ಮಗನಲ್ಲಿ ನೀನು ಹೇಗೆ ಟೀಂಗೆ ವಾಪಸ್ ಬರುತ್ತೀಯಾ? ಎಂಬುದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಬೆದರಿಸಿದ್ದರು.
ಮಾತ್ರವಲ್ಲದೆ ಇತ್ತೀಚೆಗೆ ಶ್ರೀಶಾಂತ್ ಹರ್ಭಜನ್ ವಿರುದ್ಧ ಟ್ವೀಟ್ ಮಾಡಿದ್ದಕ್ಕೆ, ತನ್ನ ಮಗಗನ್ನು ಜಾಲದಲ್ಲಿ ಸಿಲುಕಿಸಿಕೊಳ್ಳಲಾಗಿದೆ ಎಂದು ಶ್ರೀಶಾಂತ್‌ರ ಅಪ್ಪ ಹೇಳಿಕೆ ನೀಡಿದ್ದಾರೆ.

ಏನಿದು ಸ್ಪಾಟ್ ಫಿಕ್ಸಿಂಗ್?

ಕ್ರಿಕೆಟ್ ಪಂದ್ಯದಲ್ಲಿ ಆಟಗಾರರು ಮೊದಲೇ ನಿರ್ಧರಿಸಿದಂತೆ ಆಟವಾಡುವ ಮೂಲಕ ಪಂದ್ಯದ ಗತಿಯನ್ನು ಬದಲಿಸಬಲ್ಲರು. ಉದಾಹರಣೆಗೆ ಬೌಲರ್ ತನ್ನ ಎರಡನೇ ಓವರ್‌ನಲ್ಲಿ ಪದೇ ಪದೇ ವೈಡ್ ಬಾಲ್ ಎಸೆಯುವುದು ಇಲ್ಲವೇ ಬಾಟ್ಸ್‌ಮನ್ ಎರಡಂಕಿಗಳ ರನ್‌ಗಳಿಸದಂತೆ ತನ್ನನ್ನು ತಾನೇ ನಿರ್ಬಂಧಿಸಿಕೊಳ್ಳುವುದು. ಬ್ಯಾಟ್ಸ್‌ಮನ್ ಅಥವಾ ಬೌಲರ್‌ಗಳ ಇಂಥಾ ಒಳ ಒಪ್ಪಂದಗಳನ್ನು ಸ್ಪಾಟ್ ಫಿಕ್ಸಿಂಗ್ ಎಂದು ಹೇಳಲಾಗುತ್ತದೆ. ಈ ರೀತಿ ಪಂದ್ಯಗಳಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡುವ ಮೂಲಕ ಆಟಗಾರರು ಬುಕ್ಕಿಗಳಿಂದ ಹೆಚ್ಚಿನ ಹಣವನ್ನು  ಪಡೆಯುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement