ಜೈಲಿನಲ್ಲಿ ನಿದ್ರೆಯಿಲ್ಲದ ರಾತ್ರಿ ಕಳೆದ ದತ್
ಗುರುವಾರ ನ್ಯಾಯಾಲಯಕ್ಕೆ ಶರಣಾಗಿ ಅರ್ಥರ್ ರೋಡ್ ಜೈಲು ಸೇರಿದ್ದ ಬಾಲಿವುಡ್ ನಟ ಸಂಜಯ್ ದತ್ ಜೈಲಿನಲ್ಲಿ ನಿದ್ರೆಯಿಲ್ಲದೆ ...
ಮುಂಬೈ: ಗುರುವಾರ ನ್ಯಾಯಾಲಯಕ್ಕೆ ಶರಣಾಗಿ ಅರ್ಥರ್ ರೋಡ್ ಜೈಲು ಸೇರಿದ್ದ ಬಾಲಿವುಡ್ ನಟ ಸಂಜಯ್ ದತ್ ಜೈಲಿನಲ್ಲಿ ನಿದ್ರೆಯಿಲ್ಲದೆ ರಾತ್ರಿ ಕಳೆದಿದ್ದಾರೆ. 1993ರ ಮುಂಬೈ ಸ್ಫೋಟ ಪ್ರಕರಣದ ಆರೋಪಿಯಾಗಿರುವ ದತ್ 42 ತಿಂಗಳುಗಳ ಸೆರೆಮನೆ ವಾಸ ಶಿಕ್ಷೆಯನ್ನು ಇದೀಗ ಅನುಭವಿಸುತ್ತಿದ್ದಾರೆ.
ನಿನ್ನೆ ರಾತ್ರಿ ಸುಮಾರು 11 ಗಂಟೆಗೆ ದತ್ರನ್ನು ಜೈಲಿಗೆ ಕರೆದೊಯ್ಯಲಾಗಿತ್ತು. ದತ್ಗೆ ರಾತ್ರಿ ಊಟಕ್ಕೆ ಮನೆಯ ಭೋಜನ ನೀಡಲಾಗಿತ್ತು.
ದತ್ ಮನೆಯಿಂದ ಕೋರ್ಟ್ಗೆ ಆಗಮಿಸುತ್ತಿರುವ ವೇಳೆ ವ್ಯಾನ್ನಲ್ಲಿ ಕುಳಿತು ತುಂಬಾ ಅತ್ತಿದ್ದಾರೆ ಎಂದು ದತ್ರ ಅಂಗರಕ್ಷಕ ಹೇಳಿದ್ದಾನೆ.
ಆದಾಗ್ಯೂ, ಬಿಗಿ ಭದ್ರತೆಯಿರುವ ಅರ್ಥರ್ ರೋಡ್ ಜೈಲಿನಿಂದ ದತ್ರನ್ನು ಪುಣೆಯಲ್ಲಿರುವ ಯೆರ್ವಾಡ್ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಮಾಹಿತಿಯನ್ನು ಮಾಧ್ಯಮದವರಿಗೆ ನೀಡಿಲ್ಲ.