ನಾನು ದೊಡ್ಡ ತಪ್ಪು ಮಾಡಿದೆ: ಅಂಕಿತ್ ಚೌವಾಣ್
ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಕ್ರಿಕೆಟಿಗ ಅಂಕಿತ್ ಚೌವಾಣ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ನವದೆಹಲಿ: ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಕ್ರಿಕೆಟಿಗ ಅಂಕಿತ್ ಚೌವಾಣ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಐಪಿಎಲ್ 6 ನಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪದಲ್ಲಿ ಪೊಲೀಸ್ ಬಂಧನಕ್ಕೊಳಗಾಗಿರುವ ಅಂಕಿತ್ ತನ್ನ ದುರಾಸೆಯಿಂದಾಗಿ ಹೀಗೆಲ್ಲಾ ಮಾಡಿದೆ, ನಾನು ದೊಡ್ಡ ತಪ್ಪು ಮಾಡಿಕೊಂಡೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಅಂಕಿತ್ ಕಳೆದ 5 ವರ್ಷಗಳಿಂದ ಮುಂಬೈ ವಲಯದಲ್ಲಿ ಉತ್ತಮ ಬೌಲರ್ ಎಂದು ಹೆಸರು ಗಳಿಸಿದ್ದನು. 18 ಫಸ್ಟ್ ಕ್ಲಾಸ್ ಪಂದ್ಯ ಗಳನ್ನಾಡಿದ್ದ ಅಂಕಿತ್ 53 ವಿಕೆಟ್ಗಳನ್ನು ಪಡೆದು 36.43 ಸರಾಸರಿ ಹೊಂದಿದ್ದಾರೆ. ಐಪಿಎಲ್ ಆರಂಭಿಕ ಆವೃತ್ತಿಯಲ್ಲಿ ಚೌವಾಣ್ ಮುಂಬೈ ಇಂಡಿಯನ್ಸ್ ಟೀಂನಲ್ಲಿದ್ದು, 2011ರಲ್ಲಿ ಈತ ರಾಜಸ್ತಾನ ರಾಯಲ್ಸ್ ತಂಡಕ್ಕೆ ಸೇರಿದ್ದನು.
ಮುಂಬೈ ಇಂಡಿಯನ್ಸ್ ವಿರುದ್ಧ ಮೊನ್ನೆ ನಡೆದ ಪಂದ್ಯವೇ ಅಂಕಿತ್ ವೃತ್ತಿ ಜೀವನದ ಕೊನೆಯ ಪಂದ್ಯ ಆಗಿತ್ತು. ಈ ಪಂದ್ಯದ ನಂತರವೇ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ದೆಹಲಿ ಪೊಲೀಸರು ಈತನನ್ನು ಬಂಧಿಸಿದ್ದರು.
ಆದಾಗ್ಯೂ, ರಾಜಸ್ತಾನ್ ರಾಯಲ್ಸ್ ತಂಡದ ಆಟಗಾರ ಶ್ರೀಶಾಂತ್ ಕೂಡಾ ತಾನು ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅದೇ ವೇಳೆ ಬುಕ್ಕಿ ಜಿಜು ಜನಾರ್ದನ್ ತನ್ನನ್ನು ಮೋಸದಾಟದಲ್ಲಿ ಸಿಲುಕಿಸಿದ್ದಾನೆ ಎಂದು ಶ್ರೀಶಾಂತ್ ದೂರಿದ್ದಾನೆ.