ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಾಕ್‌ನಲ್ಲಿ ಬಾಂಬ್ ಸ್ಫೋಟ: 13 ಸಾವು

ಈಶಾನ್ಯ ಪಾಕಿಸ್ತಾನದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಶುಕ್ರವಾರ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಕನಿಷ್ಠ 10 ಜನ..

Lingaraj Badiger
Updated On : 17 May 2013, 4:46 am

ಪೆಶಾವರ್: ಈಶಾನ್ಯ ಪಾಕಿಸ್ತಾನದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಶುಕ್ರವಾರ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಕನಿಷ್ಠ 13 ಜನ ಮೃತಪಟ್ಟಿದ್ದಾರೆ ಮತ್ತು 30ಕ್ಕು ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೈಬರ್ ಪ್ರಾಂತ್ಯದ ಮಲಕಂಡ ಜಿಲ್ಲೆಯ ಬಾಝ್ ದರಾಹ್ ಗ್ರಾಮದಲ್ಲಿನ ಸುನ್ನಿ ಮುಸ್ಲಿಂರಿಗೆ ಸೇರಿದ ಎರಡು ಮಸೀದಿಯ ಹೊರಗಡೆ ಈ ಎರಡು ಬಾಂಬ್‌ಗಳು ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಒಂದು ಮಸೀದಿಯ ಛಾವಣಿಯೇ ಕುಸಿದು ಬಿದ್ದಿದೆ. ಇನ್ನು ಮತ್ತೊಂದು ಮಸೀದಿಯ ಕಟ್ಟಡದ ಗೊಡೆಗೆ ಹಾನಿಯಾಗಿದೆ ಎಂದು ಪೊಲೀಸ್ ಅಧಿಕಾರಿ ಬಾದ್‌ಶಾಹ್ ರೇಹಮಾನ್ ಅವರು ತಿಳಿಸಿದ್ದಾರೆ.

ಶುಕ್ರವಾರದ ಪ್ರಾರ್ಥನೆ ಆರಂಭವಾಗುವ ಕೆಲವೇ ನಿಮಿಷಗಳ ಮುನ್ನ ಈ ಎರಡು ಸ್ಫೋಟಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿ ಶಾಹಿದ್ ಅಲಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement