ಸರಬ್ಜಿತ್ ಸಾವಿನ ತನಿಖೆಗೆ ಜಡ್ಜ್ ನೇಮಕ
ಪಾಕಿಸ್ತಾನದ ಜೈಲಿನಲ್ಲಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಭಾರತೀಯ ಕೈದಿ ಸರಬ್ಜಿತ್ ಸಿಂಗ್ನ ಸಾವಿನ ತನಿಖೆ ನಡೆಸಲು ಪಾಕ್ ...
ಲಾಹೋರ್: ಪಾಕಿಸ್ತಾನದ ಜೈಲಿನಲ್ಲಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಭಾರತೀಯ ಕೈದಿ ಸರಬ್ಜಿತ್ ಸಿಂಗ್ನ ಸಾವಿನ ತನಿಖೆ ನಡೆಸಲು ಪಾಕ್ ನ್ಯಾಯಾಲಯ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡಿದೆ.
ಈ ತಿಂಗಳ ಆದಿಯಲ್ಲಿ ಕೋಲ್ ಲಾಖ್ಪಥ್ ಜೈಲಿನಲ್ಲಿ ಸಹ ಕೈದಿಗಳಿಂದ ಹಲ್ಲೆಗೊಳಗಾಗಿ ಸರಬ್ಜಿತ್ ಸಿಂಗ್ ಸಾವನ್ನಪ್ಪಿದ್ದನು.
ಸರಬ್ಜಿತ್ ಸಿಂಗ್ ಸಾವಿನ ಬಗ್ಗೆ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಲಾಹೋರ್ ಹೈಕೋರ್ಟ್ನ ಮುಖ್ಯ ನ್ಯಾಯಧೀಶ ಉಮರ್ ಅಥಾ ಬಂಡಿಯಾಲ್, ನ್ಯಾಯಮೂರ್ತಿ ಸಯ್ಯದ್ ಮಜ್ಹರ್ ಅಲಿ ಅಕ್ಬರ್ ನಖ್ವಿ ಅವರಿಗೆ ಆದೇಶಿಸಿದ್ದಾರೆ.
ಆದಾಗ್ಯೂ, ತನಿಖೆಯನ್ನು ಪೂರ್ಣಗೊಳಿಸಲು ನಖ್ವಿ ಅವರಿಗೆ ಯಾವುದೇ ಡೆಡ್ಲೈನ್ ನೀಡಿಲ್ಲ.
ಏಪ್ರಿಲ್ 26ರಂದು ಐದಾರು ಸಹ ಕೈದಿಗಳು ಸರಬ್ಜಿತ್ ಮೇಲೆ ತೀವ್ರ ಹಲ್ಲೆ ನಡೆಸಿದ್ದರು. ಈ ಹಲ್ಲೆಯಿಂದ ಗಂಭೀರ ಗಾಯಗೊಳಗಾಗಿದ್ದ ಸಿಂಗ್ ಮೇ 2ರಂದು ಲಾಹೋರ್ನಲ್ಲಿರುವ ಜಿನ್ನಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದನು.
ಈ ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸರು ಅಮೀರ್ ಅಫ್ತಾಬ್ ಮತ್ತು ಮುದಾಸ್ಸರ್ ಎಂಬೀ ಕೈದಿಗಳ ವಿರುದ್ಧ ಕೇಸು ದಾಖಲಿಸಿದ್ದರು.
ಬಾಂಬ್ ಸ್ಫೋಟದಲ್ಲಿ ಅಮಾಯಕ ಪಾಕಿಸ್ತಾನಿಗಳನ್ನು ಹತ್ಯೆಗೈದುದಕ್ಕಾಗಿ ಸರಬ್ಜಿತ್ನ್ನು ತಾವು ಹತ್ಯೆ ಮಾಡಿ ಸೇಡು ತೀರಿಸಿಕೊಂಡಿದ್ದೇವೆ ಎಂದು ಆರೋಪಿಗಳಾದ ಅಮೀರ್ ಅಫ್ತಾಬ್ ಮತ್ತು ಮುದಾಸ್ಸರ್ ಹೇಳಿದ್ದರು.
ಇತ್ತ ಸರಬ್ಜಿತ್ನ ಸಾವಿನ ಮರುದಿನ ಜಮ್ಮು ಜೈಲಿನಲ್ಲಿರುವ ಪಾಕಿಸ್ತಾನಿ ಕೈದಿ ಸನಾವುಲ್ಲಾ ರಂಜೈ ಮೇಲೆ ಸಹ ಕೈದಿಗಳು ಹಲ್ಲೆ ಮಾಡಿ ಸಾಯಿಸಿದ್ದರು.