ಸ್ಪಾಟ್ ಫಿಕ್ಸಿಂಗ್: ದ್ರಾವಿಡ್, ಶಿಲ್ಪಾ ಶೆಟ್ಟಿ ವಿಚಾರಣೆ ಸಾಧ್ಯತೆ
ಐಪಿಎಲ್ ಸ್ಪಾಟ್ ಫಿಕ್ಸಿಂಗ್ಗೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ರಾಜಸ್ತಾನ ರಾಯಲ್ಸ್ ತಂಡದ ನಾಯಕ ರಾಹುಲ್ ದ್ರಾವಿಡ್ ಮತ್ತು ತಂಡದ ...
ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ಗೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ರಾಜಸ್ತಾನ ರಾಯಲ್ಸ್ ತಂಡದ ನಾಯಕ ರಾಹುಲ್ ದ್ರಾವಿಡ್ ಮತ್ತು ತಂಡದ ಸಹ ಮಾಲೀಕತ್ವ ವಹಿಸಿರುವ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.
ಮೇ 21ರಂದು ವಿಚಾರಣೆಗೆ ಹಾಜರಾಗುವಂತೆ ಈ ಮೂವರಿಗೆ ದೆಹಲಿ ಪೊಲೀಸರು ಆದೇಶಿಸಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಶ್ರೀಶಾಂತ್, ಅಜಿತ್ ಚಂಡೀಲಾ ಮತ್ತು ಅಂಕಿತ್ ಚೌವಾಣ್ರನ್ನು ಗುರುವಾರ ದೆಹಲಿ ಪೊಲೀಸರು ಬಂಧಿಸಿದ್ದರು.
ಇದರಲ್ಲಿ ಶ್ರೀಶಾಂತ್ ಮತ್ತು ಚೌವಾಣ್ ಶುಕ್ರವಾರ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದಾಗ್ಯೂ, ಚಂಡೀಲಾ ಈವರೆಗೆ ತಪ್ಪು ಒಪ್ಪಿಕೊಂಡಿಲ್ಲ.
ಬಂಧಿತರಾಗಿರುವ ಕ್ರಿಕೆಟಿಗರನ್ನು ಗುರುವಾರ ಮುಂಬೈಯಿಂದ ದೆಹಲಿಗೆ ಕರೆತರಲಾಗಿದ್ದು, ಇವರಿಗೆ 5 ದಿನಗಳ ಪೊಲೀಸ್ ಬಂಧನ ವಿಧಿಸಲಾಗಿದೆ.