ಸ್ಪಾಟ್ ಫಿಕ್ಸಿಂಗ್: ಹೋಜ್, ರಹಾನೆ ಶಾಮೀಲು?
ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಮೂವರು ಆಟಗಾರರು ಬಂಧಿತರಾದ ಬೆನ್ನಲ್ಲೇ ಇದೀಗ...
ನವದೆಹಲಿ: ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಮೂವರು ಆಟಗಾರರು ಬಂಧಿತರಾದ ಬೆನ್ನಲ್ಲೇ ಇದೀಗ ಇನ್ನೂ ಕೆಲವು ಆಟಗಾರರ ಹೆಸರುಗಳು ಕೇಳಿ ಬರುತ್ತಿವೆ.
ಸ್ಪಾಟ್ ಫಿಕ್ಸಿಂಗ್ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಇನ್ನು ಕೆಲವು ಆಟಗಾರರು ಶಾಮೀಲಾಗಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತನಾಗಿರುವ ರಾಜಸ್ತಾನ ರಾಯಲ್ಸ್ ತಂಡದ ಮಾಜಿ ಆಟಗಾರ, ಬುಕ್ಕಿ ಅಮಿತ್ ಸಿಂಗ್ ವಿಚಾರಣೆಗೊಳಪಡಿಸಿದಾಗ ಕೆಲವು ಆಟಗಾರರ ಹೆಸರು ಬಹಿರಂಗ ಪಡಿಸಿದ್ದಾನೆ. ಅಮಿತ್ ಸಿಂಗ್, ಬ್ಯಾಟ್ಸ್ಮನ್ ಬ್ರಾಡ್ ಹೋಜ್ ಮತ್ತು ಅಜಿಂಕ್ಯ ರಹಾನೆ ಹೆಸರನ್ನು ಹೇಳಿದ್ದಾನೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಅದೇ ವೇಳೆ ಈ ಇಬ್ಬರು ಆಟಗಾರರ ಮೇಲೆ ದೆಹಲಿ ಪೊಲೀಸರು ನಿಗಾಯಿರಿಸಿದ್ದಾರೆ.