2008 ಮುಂಬೈ ದಾಳಿ ಆರೋಪಿಗಳ ವಿಚಾರಣೆ ಮುಂದೂಡಿಕೆ
2008ರ ಮುಂಬೈ ದಾಳಿಯ ಆರೋಪಿ ಲಷ್ಕರೆ ತೊಯ್ಬಾ ಕಮಾಂಡರ್ ಜಕಿಯುರ್ ರೆಹಮಾನ್ ಲಖ್ವಿ ಸೇರಿದಂತೆ ಇನ್ನುಳಿದ 7 ಮಂದಿ...
ಇಸ್ಲಾಮಾಬಾದ್: 2008ರ ಮುಂಬೈ ದಾಳಿಯ ಆರೋಪಿ ಲಷ್ಕರೆ ತೊಯ್ಬಾ ಕಮಾಂಡರ್ ಜಕಿಯುರ್ ರೆಹಮಾನ್ ಲಖ್ವಿ ಸೇರಿದಂತೆ ಇನ್ನುಳಿದ 7 ಮಂದಿ ಆರೋಪಿಗಳ ವಿಚಾರಣೆಯನ್ನು ಮೇ 25ಕ್ಕೆ ಮುಂದೂಡಲಾಗಿದೆ.
ಈ ಬಗ್ಗೆ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಚೌಧರಿ ಹಬೀಬ್ ಉರ್ ರೆಹಮಾನ್ ರಜೆಯಲ್ಲಿರುವುದರಿಂದಾಗಿ ವಿಚಾರಣೆಯನ್ನು ಶನಿವಾರ ಮುಂದೂಡಲಾಗಿದೆ.
ಇಸ್ಲಾಮಬಾದ್ನಲ್ಲಿ ಮೇ 3ರಂದು ಉಗ್ರರ ಗುಂಡಿಗೆ ಬಲಿಯಾದ ಮುಖ್ಯ ನ್ಯಾಯಾವಾದಿ ಚೌಧರಿ ಜುಲ್ಫೀಕರ್ ಅಲಿ ಅವರ ಸ್ಥಾನಕ್ಕೆ ಇನ್ನೊಬ್ಬ ನ್ಯಾಯವಾದಿಯನ್ನು ಫೆಡರಲ್ ತನಿಖಾ ಸಂಸ್ಥೆಯು ಈವರೆಗೆ ನೇಮಕ ಮಾಡಿಲ್ಲ.
ಆದಾಗ್ಯೂ, ಅಲಿ ಅವರ ಹತ್ಯೆಯ ನಂತರ ಹೆಚ್ಚುವರಿ ನ್ಯಾಯವಾದಿ ಚೌಧರಿ ಅಜರ್ ಪ್ರಸ್ತುತ ಕೇಸು ವಾದಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ.
ಏತನ್ಮಧ್ಯೆ, ಅಲಿಯವರ ಹತ್ಯೆಯ ಹೊಣೆಯನ್ನು ಈವರೆಗೆ ಯಾವುದೇ ಉಗ್ರ ಸಂಘಟನೆಗಳು ಒಪ್ಪಿಕೊಂಡಿಲ್ಲ.