ಕಲ್ಲಿದ್ದಲು ಹಗರಣದ ತನಿಖಾಧಿಕಾರಿ ಸಿಬಿಐ ಬಲೆಗೆ
ಕಲ್ಲಿದ್ದಲು ಹಗರಣದ ತನಿಖೆ ನಡೆಸುತ್ತಿರುವ ತಂಡದ ನೇತೃತ್ವ ವಹಿಸಿದ್ದ ಹಿರಿಯ ಪೊಲೀಸ್ ಅಧಿಕಾರಿ ಸೇರಿದಂತೆ ಇನ್ನಿಬ್ಬರು..
ನವದೆಹಲಿ: ಕಲ್ಲಿದ್ದಲು ಹಗರಣದ ತನಿಖೆ ನಡೆಸುತ್ತಿರುವ ತಂಡದ ನೇತೃತ್ವ ವಹಿಸಿದ್ದ ಹಿರಿಯ ಪೊಲೀಸ್ ಅಧಿಕಾರಿ ಸೇರಿದಂತೆ ಇನ್ನಿಬ್ಬರು ವ್ಯಕ್ತಿಗಳನ್ನು ಭ್ರಷ್ಟಾಚಾರದ ಆರೋಪದಲ್ಲಿ ಸಿಬಿಐ ಬಂಧಿಸಿದೆ.
ಈ ಅಧಿಕಾರಿಗಳು ಭೂಮಿ ವಿವಾದವನ್ನು ಇತ್ಯರ್ಥಗೊಳಿಸುವುದಕ್ಕಾಗಿ ಉದ್ಯಮಿಯೊಬ್ಬರಿಂದ 7 ಲಕ್ಷ ರು. ಲಂಚ ಪಡೆದಿದ್ದಾರೆ ಎಂಬ ಆರೋಪದ ಮೇರೆಗೆ ಸಿಬಿಐ ಈ ಅಧಿಕಾರಗಳನ್ನು ಬಂಧಿಸಿದೆ.
ಕಲ್ಲಿದ್ದಲು ಘಟಕ ಹಂಚಿಕೆ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ತಂಡದ ನೇತೃತ್ವ ವಹಿಸಿರುವ ಎಸ್.ಪಿ ವಿವೇಕ್ ದತ್ತಾ ಪರವಾಗಿ ಇನ್ನೊಬ್ಬ ಇನ್ಸ್ಪೆಕ್ಟರ್ ರಾಜೇಶ್ ಲಂಚ ಸ್ವೀಕರಿಸುತ್ತಿರುವ ವೇಳೆ ಸಿಬಿಐ ದಾಳಿ ನಡೆಸಿದೆ.
ಈ ಬಗ್ಗೆ ನಮಗೆ ಈ ಮೊದಲೇ ಮಾಹಿತಿ ಇತ್ತು. ಆದ ಕಾರಣ ನಾವು ಈ ಅಧಿಕಾರಿಗಳ ಮೇಲೆ ನಿಗಾ ಇರಿಸಿದ್ದೆವು. ಇವತ್ತು ಅವರು ಲಂಚ ಸ್ವೀಕರಿಸುತ್ತಿರುವಾಗ ಬಂಧಿಸಿದೆವು ಎಂದು ಸಿಬಿಐ ಡೈರೆಕ್ಟರ್ ರಂಜಿತ್ ಸಿನ್ಹಾ ಹೇಳಿದ್ದಾರೆ.