ಪೊಲೀಸ್ ಆಯುಕ್ತರಾಗಿ ಮಿರ್ಜಿ ಮರು ನೇಮಕ
ಚುನಾವಣೆ ಹಿನ್ನೆಲೆ, ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರನ್ನು ಸರ್ಕಾರ ವರ್ಗಾಹಿಸಿತ್ತು. ಇದೀಗ ಸರ್ಕಾರ ಮಿರ್ಜಿ ಅವರನ್ನು...
ಬೆಂಗಳೂರು: ಚುನಾವಣೆ ಹಿನ್ನೆಲೆ, ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರನ್ನು ಸರ್ಕಾರ ವರ್ಗಾಹಿಸಿದ್ದು, ಇದೀಗ ಮಿರ್ಜಿ ಅವರನ್ನು ಆಯುಕ್ತ ಸ್ಥಾನಕ್ಕೆ ಮರು ನೇಮಕ ಮಾಡಿರುವುದಾಗಿ ಶನಿವಾರ ಸರ್ಕಾರ ಆದೇಶ ಹೊರಡಿಸಿದೆ.
ವಿಧಾನಸಭಾ ಚುನಾವಣೆ ಸಂಬಂಧ, ಚುನಾವಣೆ ಆಯೋಗದ ಸೂಚನೆಯಂತೆ ಪೊಲೀಸ್ ಆಯುಕ್ತ ಮಿರ್ಜಿ ಅವರನ್ನು ಸರ್ಕಾರ ಏ.3ರಂದು ವರ್ಗಾವಣೆ ಮಾಡಿ ಆ ಜಾಗಕ್ಕೆ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಎಚ್. ಔರಾದಕರ್ ಅವರನ್ನು ನೇಮಿಸಿತ್ತು. ಆದರೆ ಇದೀಗ ಔರಾದಕರ್ ಅವರನ್ನು ವರ್ಗಾಹಿಸಿರುವ ಸರ್ಕಾರ ಆ ಜಾಗಕ್ಕೆ ಮಿರ್ಜಿ ಅವರನ್ನು ಪುನಃರ್ ನೇಮಕ ಮಾಡಿದೆ.
ಚುನಾವಣಾ ಹಿನ್ನಲೆಯಲ್ಲಿ ಮಿರ್ಜಿ ಅವರನ್ನು ವರ್ಗಾವಣೆ ಮಾಡುವಂತೆ ಚುನಾವಣೆ ಆಯೋಗ ಸರ್ಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆ ಮಿರ್ಜಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಅವರ ಜಾಗಕ್ಕೆ ಔರಾದಕರ್ ಅವರನ್ನು ನೇಮಿಸಿತ್ತು. ಆದರೆ ವರ್ಗಾವಣೆ ಮಾಡಲಾಗಿದ್ದ ಮಿರ್ಜಿ ಅವರಿಗೆ ಯಾವುದೇ ಹುದ್ದೆ ನಿಗದಿಯಾಗಿರಲಿಲ್ಲ.