ಸ್ಪಾಟ್ ಫಿಕ್ಸಿಂಗ್: ಶ್ರೀಶಾಂತ್ ತಂಗಿದ್ದ ಹೋಟೆಲ್ ಮೇಲೆ ಪೊಲೀಸ್ ದಾಳಿ
ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈ ಪೊಲೀಸರು ಶ್ರೀಶಾಂತ್ ತಂಗಿದ್ದ 5 ಸ್ಟಾರ್ ಹೊಟೇಲ್ ಮೇಲೆ...
ಮುಂಬೈ: ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈ ಪೊಲೀಸರು ಶ್ರೀಶಾಂತ್ ತಂಗಿದ್ದ 5 ಸ್ಟಾರ್ ಹೊಟೇಲ್ ಮೇಲೆ ಶನಿವಾರ ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಪೊಲೀಸರು ಅಲ್ಲಿಂದ ಲ್ಯಾಪ್ಟಾಪ್ ವೊಂದನ್ನು ವಶಪಡಿಸಿಕೊಂಡಿದ್ದಾರೆ. ಆದಾಗ್ಯೂ, ದಾಳಿ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂಬೈ ಪೊಲೀಸರು ಬಹಿರಂಗ ಪಡಿಸಿಲ್ಲ.
ಅದೇ ವೇಳೆ ಅಜಿತ್ ಚಂಡೀಲಾ ಬುಕ್ಕಿಗಳ ಜತೆ ಮಾತನಾಡುತ್ತಿದ್ದ ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತ ಸ್ಪಾಟ್ ಫಿಕ್ಸಿಂಗ್ಗಾಗಿ ಹಣ ಎಲ್ಲಿಂದ ಬಂತು? ಎಂಬುದರ ಬಗ್ಗೆ ನಾಲ್ಕು ನಗರಗಳಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಈ ಶೋಧ ಕಾರ್ಯಕ್ಕಾಗಿ ದೆಹಲಿ ಪೊಲೀಸರ ವಿಶೇಷ ಪಡೆಯನ್ನು ಅಹಮದಾಬಾದ್, ಕೊಲ್ಕತ್ತಾ, ಮುಂಬೈ ಮತ್ತು ಹೈದ್ರಾಬಾದ್ಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.