ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸ್ಪಾಟ್ ಫಿಕ್ಸಿಂಗ್: ಹಣದ ಮೂಲ ಪತ್ತೆಗೆ ಶೋಧ ಆರಂಭ

ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ಗಾಗಿ ಹಣ ಎಲ್ಲಿಂದ ಬರುತ್ತಿದೆ? ಹಣದ ಮೂಲ ಯಾವುದು? ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ದೆಹಲಿ ...

Rashmi Kasaragodu
Updated On : 18 May 2013, 12:35 pm

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ಗಾಗಿ ಹಣ ಎಲ್ಲಿಂದ ಬರುತ್ತಿದೆ? ಹಣದ ಮೂಲ ಯಾವುದು? ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ದೆಹಲಿ ಪೊಲೀಸರು ನಾಲ್ಕು ಪ್ರಮುಖ ನಗರಗಳಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ.

ದೆಹಲಿ ಪೊಲೀಸರು ವಿಶೇಷ ಪಡೆ ಅಹಮದಾಬಾದ್, ಕೊಲ್ಕತ್ತಾ, ಮುಂಬೈ ಮತ್ತು ಹೈದ್ರಾಬಾದ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಒಂದು ಓವರ್‌ನಲ್ಲಿ ಇಂತಿಷ್ಟು ರನ್‌ಗಳನ್ನು ನೀಡುವುದಾಗಿ 60 ಲಕ್ಷ ರು. ಸ್ಪಾಟ್ ಫಿಕ್ಸಿಂಗ್ ಮಾಡಿದ್ದ ಶ್ರೀಶಾಂತ್, ಅಜಿತ್ ಚಂಡೀಲಾ ಮತ್ತು ಅಂಕಿತ್ ಚೌವಾಣ್ ಅವರನ್ನು ಗುರುವಾರ ದೆಹಲಿ ಪೊಲೀಸರು ಬಂಧಿಸಿದ್ದರು.

ಪೊಲೀಸ್ ಮೂಲಗಳ ಪ್ರಕಾರ ಚಂಡೀಲಾ ಸ್ಪಾಟ್ ಫಿಕ್ಸಿಂಗ್‌ಗಾಗಿ 20 ಲಕ್ಷ ರು. ಪಡೆದುಕೊಂಡಿದ್ದರು.

ಅದೇ ವೇಳೆ ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಹಣ ಪಡೆದಿದ್ದು, ಮ್ಯಾಚ್ ಮುಗಿದ ಕೂಡಲೇ ಚೌವಾಣ್‌ರನ್ನು ಬಂಧಿಸಿರುವುದರಿಂದ ಚೌವಾಣ್‌ಗೆ ಬುಕ್ಕಿಗಳಿಂದ ಹಣ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಸ್ಪಾಟ್ ಫಿಕ್ಸಿಂಗ್‌ಗೆ ಸಂಬಂಧಪಟ್ಟಂತೆ ಶ್ರೀಶಾಂತ್‌ಗೆ ಎಲ್ಲ ಕರೆಗಳನ್ನು ಮಾಡಿದ್ದು ಆತನ ಆಪ್ತ ಸ್ನೇಹಿತ ಜಿಜು ಎಂದು ಪೊಲೀಸರು ಹೇಳಿದ್ದಾರೆ.

ಶ್ರೀಶಾಂತ್ ಜತೆಗೆ ಜಿಜು ಯಾವತ್ತೂ ಇರುತ್ತಿದ್ದು, ಶ್ರೀಶಾಂತ್ ಜತೆಯಲ್ಲಿಯೇ ಹೋಟೆಲ್‌ನಲ್ಲಿರುತ್ತಿದ್ದನು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಆದಾಗ್ಯೂ, ಶ್ರೀಶಾಂತ್ ಮತ್ತು ಇನ್ನಿಬ್ಬರು ಆಟಗಾರರು ಶುಕ್ರವಾರ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು.
ಆದರೆ ಈ ಮೂವರು ಆಟಗಾರರು ಯಾವುದೇ ತಪ್ಪನ್ನು ಮಾಡಿಲ್ಲ ಅವರನ್ನು ಮೋಸದಾಟದಲ್ಲಿ ಸಿಲುಕಿಸಲಾಗಿದೆ ಎಂದು ಬಂಧಿತರಾಗಿರುವ ಆಟಗಾರರ ವಕೀಲರು ವಾದಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement