ಕಾರ್ ಬಾಂಬ್ ಸ್ಫೋಟ: 34 ಸಾವು
ಬಘದಾದ್: ಇರಾಕ್ನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕಾರ್ ಬಾಂಬ್ ಸ್ಫೋಟಗೊಂಡ ಪರಿಣಾಮ 34 ಜನರು ಮೃತಪಟ್ಟಿರುವ ಘಟನೆ ಸೋಮಾವಾರ ಸಂಭವಿಸಿದೆ.
ಶೀಟ್ಟೆ ಮುಸ್ಲಿಂ ಜನಾಂಗದವರು ಇರುವ ಸ್ಳಳವನ್ನು ಗುರಿಯಾಗಿಸಿಕೊಂಡಿರುವ ದುಷ್ಮರ್ಮಿಗಳು ಕಾರ್ ಬಾಂಬ್ ಸ್ಫೋಟಿಸಿದ್ದಾರೆ. ಬಘದಾದ್ ಮತ್ತು ದಕ್ಷಿಣ ವಲಯದಲ್ಲಿರು ಪ್ರದೇಶಗಳಲ್ಲಿ 11 ಕಾರ್ ಬಾಂಬ್ ಸ್ಫೋಟಗೊಂಡಿವೆ.
ಇರಾಖ್ ರಾಜಧಾನಿಯಲ್ಲಿ 9 ಕಾರ್ ಬಾಂಬ್ ಸ್ಫೋಟಗೊಂಡು 24 ಜನರು ಸಾವನ್ನಪ್ಪಿದ್ದು, 112ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ರಾ ನಗರದಲ್ಲಿ ರೆಸ್ಟೋರೆಂಟ್ ಮತ್ತು ಬಸ್ನಿಲ್ದಾನದಲ್ಲಿ ಎರಡು ಕಾರ್ ಬಾಂಬ್ ಸ್ಫೋಟಿಸಿದ ಪರಿಣಾಮ 10 ಜನರು ಸಾವನ್ನಪ್ಪಿದ್ದು, 27 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ದಾಳಿಕೋರರ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.