ನಕಲಿ ಎನ್‌ಕೌಂಟರ್: ಮೋದಿ ವಿರುದ್ಧ ಪವಾರ್ ಕಿಡಿ
ಥೇನ್: 2004ರಲ್ಲಿ ಇಶ್ರತ್ ಜಹಾನ್ ಮೇಲೆ ನಡೆದ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಕೇಂದ್ರ ಸಚಿವ ಶರದ್ ಪವಾರ್ ಅವರು ಸೋಮವಾರ ಕಿಡಿಕಾರಿದ್ದಾರೆ.
ಮೋದಿ ಅವರು ಉಗ್ರನನ್ನು ಹತ್ಯೆ ಮಾಡಿದ್ದೇವೆ ಎಂದು ಘೋಷಿಸಿಕೊಂಡಿದ್ದರು. ಆದರೆ ಅಲ್ಲಿ ನಡೆದಿರುವುದು ನಕಲಿ ಎನ್‌ಕೌಂಟರ್. ಮುಂಬೈ ಪೊಲೀಸರು ತಮ್ಮ ಕರ್ತವ್ಯದಲ್ಲಿ ವಿಫಲವಾಗಿದ್ದಾರೆ ಎಂದು ಪವಾರ್ ಆರೋಪಿಸಿದ್ದಾರೆ.
ಇಶ್ರತ್ ಮುಗ್ದೆಯಾಗಿದ್ದಳು. ಅವಳು ಯಾವ ಅಪರಾಧ ಮಾಡಿರಲಿಲ್ಲ. ಆಕೆಯನ್ನು ನಕಲಿ ಎನ್‌ಕೌಂಟ್‌ರ್ ಮಾಡಿ ಉಗ್ರರನ್ನೇ ನಾಶಮಾಡಿದಂತೆ ಕೊಂಡಾಡುತ್ತಿದ್ದಾರೆ. ನಕಲಿ ಎನ್‌ಕೌಂಟರ್ ಗುಜರಾತ್ ಸರ್ಕಾರಕ್ಕೆ ಸಾಮಾನ್ಯವಾಗಿ ಬಿಟ್ಟಿದೆ ಎಂದು ಪವಾರ್ ಕಿಡಿಕಾರಿದ್ದಾರೆ.
ಜೂನ್ 15ರಂದು 19ನೇ ವಯಸ್ಸಿನ ಇಶ್ರತ್ ಜಹಾನ್, ಜವೇದ್ ಶೈಖ್ ಅಮ್ಜಾದಲಿ, ಅಕ್ಬರ್ ರಾಣ ಮತ್ತು ಝೀಶನ್ ಜೋಹರ್ ಎಂಬವವರನ್ನು ಅಹಮದಬಾದ್‌ನ ಹೊರವಲಯದಲ್ಲಿ ಎನ್‌ಕೌಂಟರ್ ಮಾಡಲಾಗಿತ್ತು.
ಆದರೆ ಎನ್‌ಕೌಂಟರ್ ಆದ ಈ ನಾಲ್ವರಲ್ಲಿ ಇಶ್ರತ್ ಜಹಾನ್ ಮುಗ್ದೆ. ಆಕೆಯನ್ನು ಆಮಾನುಷವಾಗಿ ಹತ್ಯೆ ಮಾಡಲಾಗಿದೆ. ಮೋದಿ ಸರ್ಕಾರ ನಕಲಿ ಎನ್‌ಕೌಂಟರ್ ಮಾಡುವುದನ್ನಾ ರೂಢಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಶ್ರತ್ ಸೇರಿ ಇತರೆ ಮೂವರನ್ನು ಹತ್ಯೆಮಾಡಲಾದ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದೆ.